ಬೆಂಗಳೂರು:- ಆಗಾಗ ಮನೆ ಬಿಟ್ಟು ತವರು ಮನೆ ಸೇರುತ್ತಿದ್ದ ಪತ್ನಿಯಿಂದ ಖಿನ್ನತೆಗೆ ಒಳಗಾಗಿ ಪತಿರಾಯ ನೇಣಿಗೆ ಕೊರಳೊಡ್ಡಿದ ಘಟನೆ ನಗರದ ಕೆ.ಪಿ.ಅಗ್ರಹಾರದಲ್ಲಿ ಜರುಗಿದೆ. ಗೋವರ್ಧನ್ ಆತ್ಮಹತ್ಯೆಗೊಳಗಾದ ಪತಿ ಎಂದು ಗುರುತಿಸಲಾಗಿದೆ.
ಏಳು ವರ್ಷಗಳ ಹಿಂದೆ ಗೋವರ್ಧನ್ ಜೊತೆ ಪ್ರಿಯಾರ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು. ಆದರೆ ಕಳೆದ ಒಂದು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದ ಪತ್ನಿ ವಾಪಸ್ಸಾಗಿರಲಿಲ್ಲ. ಹೀಗಾಗಿ ಗೋವರ್ಧನ್ ಖಿನ್ನತೆಗೊಳಗಾಗಿದ್ದರು. ಅದರಂತೆ ಭಾನುವಾರ ರಾತ್ರಿ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಸಂಜೆಯಾದರೂ ಮನೆಯಿಂದ ಹೊರಬರದ ಕಾರಣ ಅನುಮಾನ ಉಂಟಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೆ.ಪಿ ಅಗ್ರಹಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಗೋವರ್ಧನ್ ಸಾವಿಗೆ ಪತ್ನಿ ಪ್ರಿಯಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.