ಮಂಡ್ಯ:- ಖಾಸಗಿ ವಿದ್ಯುತ್ ಉತ್ಪಾದನಾ ಕೆನಾಲ್ ಗೆ ಕಾಡಾನೆ ಬಿದ್ದಿದ್ದು, ಮೂರು ದಿನಗಳಾದರೂ ಆನೆ ಮೇಲೆತ್ತದೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬ್ಲಫ್ ಬಳಿ ಘಟನೆ ಜರುಗಿದೆ. ಶನಿವಾರ ರಾತ್ರಿ ಕೆನಾಲ್ ಗೆ ಕಾಡಾನೆ ಬಿದ್ದಿದ್ದು, ಆನೆ ಬಿದ್ದ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿಗಳು ಸುಮ್ಮನಾಗಿದ್ದಾರೆ. ಆದ್ರೆ ವಿಚಾರ ತಿಳಿದ್ರು ಅರಣ್ಯ ಇಲಾಖೆಯು ಆನೆ ಮೇಲೆತ್ತುವ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಮೂರು ದಿನಗಳಿಂದ ಕೆನಾಲ್ ನಲ್ಲೇ ಆನೆ ಓಡಾಟ ನಡೆಸಿದ್ದು, ಆಹಾರವಿಲ್ಲದೆ ಆನೆ ಆತಂಕದಲ್ಲಿ ಓಡಾಟ ಮಾಡಿದೆ. ಕಾಡಾನೆ ಮೇಲೆತ್ತಲು ಕಾರ್ಯಾಚರಣೆ ಮೂಲಕ ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಸುಮಾರು 20 ಅಡಿ ಆಳದ ಕೆನಾಲ್ ನಲ್ಲಿ ಕಾರ್ಯಾಚರಣೆ ಮುಂದುವರಿದಿದೆ.



