ಹಾಸನ:- ಲಾರಿ ಚಾಲಕನ ಮೇಲೆ ಪುಂಡಾನೆಯೊಂದು ದಾಳಿಗೆ ಯತ್ನಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಜರುಗಿದೆ. ಸೆರೆ ಹಿಡಿದಿದ್ದ ಕಾಡಾನೆಯ ಸ್ಥಳಾಂತರಿಸುವ ವೇಳೆ ಈ ಅವಘಡ ಸಂಭವಿಸಿದೆ.
ಆನೆಯನ್ನು ಸೆರೆಹಿಡಿದು ಕ್ರೈನ್ ಮೂಲಕ ಲಾರಿಯ ಮೇಲೆ ಏರಿಸಲಾಗುತ್ತಿತ್ತು. ಈ ವೇಳೆ ಬೆಲ್ಟ್ ನೀಡಲು ಹೋಗುತ್ತಿದ್ದ ಲಾರಿ ಚಾಲಕ ರೆಹಮತ್ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದೆ. ಸೊಂಡಲಿನಿಂದ ಲಾರಿ ಚಾಲಕನನ್ನು ಆನೆ ನೂಕಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಾಡಾನೆಯನ್ನು ಕರೆತರುವಾಗ ಸಾಕಾನೆಗಳ ಬಳಿ ಪುಂಡಾಟ ಮೆರೆದಿದೆ. ಆದರೂ ಇಟಿಎಫ್ ಸಿಬ್ಬಂದಿ ಯಶಸ್ವಿಯಾಗಿ ಕಾಡಾನೆಯನ್ನು ಕರೆ ತಂದಿದ್ದಾರೆ.



