ಜನರ ಸಂಚಾರವಿಲ್ಲದ ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು: ಹತ್ತಾರು ಎಕರೆ ಸುಟ್ಟು ಕರಕಲು!

0
Spread the love

ಚಿಕ್ಕಮಗಳೂರು:- ಜನರೇ ಸಂಚರಿಸದ ಗುಡ್ಡದ ತುತ್ತತುದಿಯಲ್ಲಿ ಕಾಡ್ಗಿಚ್ಚು ಸಂಭವಿಸಿರುವ ಘಟನೆ ಕಳಸದ ಆನೆಗುಡ್ಡ ಮೀಸಲು ಅರಣ್ಯ ಭಾಗದಲ್ಲಿ ಜರುಗಿದೆ.

Advertisement

ಸುತ್ತಮುತ್ತಲಿನ ಸುಮಾರು ಹತ್ತಾರು ಎಕರೆ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಸುಟ್ಟು ಕರಕಲಾಗಿದೆ. ಗುಡ್ಡದ ಕಾಡ್ಗಿಚ್ಚಿನ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ. ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದ ಪರಿಣಾಮ ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ.

ಗುಡ್ಡದ ಒಂದು ಭಾಗ ಹಸಿರಿನಿಂದ ಕೂಡಿದ್ದು, ಮತ್ತೊಂದು ಭಾಗ ಸಂಪೂರ್ಣ ಒಣಗಿ ನಿಂತಿದೆ. ಪ್ರವಾಸಿಗರು, ಜನರೇ ಹೋಗದ ಜಾಗದಲ್ಲಿ ಹೇಗೆ ಬೆಂಕಿ ಬಿದ್ದಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಸಿಲ ಧಗೆಗೆ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.


Spread the love

LEAVE A REPLY

Please enter your comment!
Please enter your name here