ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ಕೊಟ್ಟಿದ್ದಾರೆ.
Advertisement
ಇಂದು ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸಾರಥಿ ತೊರೆಯುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ನಾನು ಅಧಿಕಾರಿದಲ್ಲಿ ಇರ್ತಿನೋ ಇರಲ್ವೋ ಗೊತ್ತಿಲ್ಲ. ಆದ್ರೆ,ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು.
ನಾನು ಪರ್ಮನೆಂಟ್ ಆಗಿ ಇರೋದಕ್ಕೆ ಆಗಲ್ಲ. ಆಗ್ಲೇ ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಆಯ್ತು. ಡಿಸಿಎಂ ಆದ ತಕ್ಷಣವೇ ಬಿಡಬೇಕು ಅಂತ ಇದ್ದೆ. ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಮುಂದುವರಿಯಿರಿ ಅಂತ ಹೇಳಿದ್ರು. ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂದು ಹೇಳುವ ಮೂಲಕ ಅಧಿಕಾರ ತೊರೆಯುವ ಬಗ್ಗೆ ಡಿಕೆಶಿ ಬೇಸರದಲ್ಲೇ ಸುಳಿವು ಕೊಟ್ಟಿದ್ದಾರೆ.


