ಬೆಂಗಳೂರು: ಹಲವಾರು ದಿನಗಳಿಂದ ಸಿಎಂ ಸಿದ್ದರಾಮಯ್ಯರನ್ನು ಟೀಕಿಸುತ್ತಲೇ ಬಂದಿದ್ದ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಇದೀಗ ದಿಢೀರನೆ ಸಿಎಂ ನಿವಾಸಕ್ಕೆ ಆಗಮನಿಸಿ ಸುಮಾರು ಒಂದು ತಾಸು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ನಡೆದ ಈ ವಿದ್ಯಮಾನ ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
Advertisement
ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಂಪುಟ ಸೇರಲಿರುವ ಬಿ ಕೆ ಹರಿಪ್ರಸಾದ್ ಅವರು ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಿ ಕೆ ಹರಿಪ್ರಸಾದ್ ನೇಮಕ ಮಾಡುವ ಸಾಧ್ಯತೆಗಳು ಬಹಳ ಹೆಚ್ಚಾಗಿ ಕಂಡುಬರುತ್ತಿದೆ. ಶುಕ್ರವಾರ ಜನಾಂದೋಲನ ಸಭೆ ಬಳಿಕ ಸಂಪುಟ ರಚನೆ ಸಾಧ್ಯತೆ ಮಾಡಲಾಗಿದ್ದು ಶನಿವಾರ ಸಂಪುಟ ರಚನೆ ಸಾಧ್ಯತೆ ಎಂದು ಬಲ್ಲ ಮೂಲಗಳ ಪ್ರಕಾರ ಮಾಹಿತಿ ಹೊರಬೀಳಲಿದೆ.