ಗದಗ:- ಭಾರೀ ಗಾಳಿಯಿಂದಾಗಿ ಅತೀ ವೇಗವಾಗಿ ತಿರುಗಿದ ವಿಂಡ್ ಫ್ಯಾನ್ ನ ರೆಕ್ಕೆಗಳು ಕಿತ್ತು ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗುಡ್ಡದಲ್ಲಿ ಜರುಗಿದೆ.
ಪವನ ವಿದ್ಯುತ್ ಫ್ಯಾನ್ ಅನ್ನು ಇಲ್ಲಿನ ಕಾಲಕಾಲೇಶ್ವರ ಗುಡ್ಡದಲ್ಲಿ ಸುಮಾರು 18 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಇದೀಗ ರೆಕ್ಕೆಗಳು ಕಟ್ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ವಿಂಡ್ ಫ್ಯಾನ್ ನ ರೆಕ್ಕೆ ಕಟ್ ಆಗಿ ಬೀಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಂಡ್ ಫ್ಯಾನ್ ರೆಕ್ಕೆಗಳು ಕಟ್ ಆಗುತ್ತಿರುವ ಕಾರಣ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿ ಆಗಿದೆ.
ಗುಡ್ಡದ ಕೆಳಗಡೆ ಬಿದ್ರೆ ಮನೆಗಳ ಮೇಲೆ ಫ್ಯಾನ್ ನ ರೆಕ್ಕೆ ಬೀಳುತ್ತಿತ್ತು. ಆದ್ರೆ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



