ಬಾಗಲಕೋಟೆ: ಸ್ನಾನ ಮಾಡಲು ಹೋಗುತ್ತಿದ್ದ ಮಹಿಳೆಯ ತಲೆಗೆ ಅಪರಿಚಿತರಿಂದ ಹಲ್ಲೆ ಮಾಡಿದ ಪರಿಣಾಮ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದೆ. ಶೋಭಾ ಪರಶುರಾಮ ಮಾಂಗ್(40) ಕೊಲೆಯಾದ ದುರ್ದೈವಿಯಾಗಿದ್ದು,
Advertisement
ಶೋಭಾ ಸ್ನಾನ ಮಾಡುವಾಗಲೇ ಯಾರೋ ದುಷ್ಕರ್ಮಿಗಳು ಕಬ್ಬಿನದ ರಾಡ್ ನಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ತ್ರಾವದಿಂದ ಕ್ಷಣಾರ್ಧದಲ್ಲಿ ಮೃತಪಟ್ಟಿದ್ದಾಳೆ.
ವಿಷಯ ತಿಳಿದು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಆರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.