ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕಾಟನ್ ಪೇಟೆ ದರ್ಗಾ ರಸ್ತೆಯಲ್ಲಿ ಮಹಿಳೆಯನ್ನು ಹತ್ಯೆಗೈದು ಲಕ್ಷಾಂತರ ಮೌಲ್ಯದ ಚಿನ್ನಾಭರಣದೊಂದಿಗೆ ಹಂತಕ ಎಸ್ಕೇಪ್ ಆದ ಘಟನೆ ಜರುಗಿದೆ.
40 ವರ್ಷದ ಲತಾ ಕೊಲೆಯಾದ ಮಹಿಳೆ. ಮೃತ ಲತಾ ಪತಿ ಹೋಲ್‌ಸೇಲ್ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಹತ್ಯೆ ನಡೆದಿದ್ದು, ಕೊಲೆ ಬಳಿಕ ಲಕ್ಷಾಂತರ ಮೌಲ್ಯದ ಚಿನ್ನಭರಣ ದೋಚಿ ಹಂತಕ ಪರಾರಿಯಾಗಿದ್ದಾನೆ.
ಮಗ ಶಾಲೆಗೆ ಹೋಗಿದ್ದ. ಮನೆಯಲ್ಲಿ ಲತಾ ಒಬ್ಬಳೇ ಇದ್ದ ವೇಳೆ ಕೊಲೆ ನಡೆದಿದೆ. ಮಧ್ಯಾಹ್ನ ಪತಿ ಪ್ರಕಾಶ್ ಮನೆಗೆ ಬಂದ ವೇಳೆ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಮಗಳ ಮದುವೆಗೆ ಎಂದು ಲತಾ ಕುಟುಂಬ ಹಂತ ಹಂತವಾಗಿ ಚಿನ್ನಾಭರಣ ಖರೀದಿ ಮಾಡಿತ್ತು. ಕೊಲೆ ಬಳಿಕ ಹಂತಕ ಈ ಚಿನ್ನಾಭರಣ ಸಹಿತ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.