ಜಾತ್ರೆಯಲ್ಲಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ಮಹಿಳೆ: ಗಂಭೀರ ಗಾಯ

0
Spread the love

ಕಲಬುರ್ಗಿ:- ಚಿತ್ತಾಪುರ ತಾಲೂಕಿನ ಹಲಕರ್ಟಿಯ ವೀರಭದ್ರೇಶ್ವರ ಜಾತ್ರೆಯಲ್ಲಿ ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮಹಿಳೆಯೊಬ್ರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.  ಚಿತ್ತಾಪುರ ತಾಲೂಕಿನ ಹಲಕರ್ಟಿಯ ವೀರಭದ್ರೇಶ್ವರ ಜಾತ್ರೆಯಲ್ಲಿ ಘಟನೆ ನಡೆದಿದ್ದು ಗಾಯಗೊಂಡ ಮಹಿಳೆ ಸೊಲ್ಲಾಪುರ ಮೂಲದವರು ಎನ್ನಲಾಗಿದೆ.

Advertisement

ಮಹಿಳೆ ಕೆಂಡದಲ್ಲಿ ಬೀಳುವ ದೃಶ್ಯ ಜಾತ್ರೆಗೆ ಬಂದಿದ್ದ ಭಕ್ತರೊಬ್ಬರ ಮೊಬೈಲಲ್ಲಿ ಸೆರೆಯಾಗಿದೆ. ಸರತಿ ಸಾಲಲ್ಲಿ ಬಂದು ಕೆಂಡ ಹಾಯುವಾಗ ಎಡವಿ ಬಿದ್ದ ಹಿನ್ನಲೆ ಮುಖ ಹಾಗು ಕುತ್ತಿಗೆಗೆ ಸುಟ್ಟ ಗಾಯಗಳಾಗಿವೆ..ಪ್ರತಿವರ್ಷ ಅನೇಕ ಭಕ್ತರು ಹರಕೆ ಹೊತ್ತು ಕೆಂಡ ಹಾಯುವುದು ಜಾತ್ರೆಯ ಸಂಪ್ರದಾಯ.


Spread the love

LEAVE A REPLY

Please enter your comment!
Please enter your name here