ಬೆಂಗಳೂರು:- ಮೊದಲ ರಾತ್ರಿಯ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಡನ ವಿರುದ್ಧ ಪತ್ನಿಯೋರ್ವಳು ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಜರುಗಿದೆ.
ಸಂತ್ರಸ್ತೆ ಒಂದೂವರೆ ವರ್ಷದ ಹಿಂದೆ ಗೋವಿಂದರಾಜು ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ಲು. ಮದುವೆಯಾದ ನಂತರ ಪತಿ ಗೋವಿಂದರಾಜು ಕೆಲಸಕ್ಕೆ ಹೋಗದೇ ಆನ್‌ಲೈನ್ ಬೆಟ್ಟಿಂಗ್ ಗೇಮ್ ಆಡ್ಕೊಂಡು ಮನೆಯಲ್ಲೇ ಇರ್ತಿದ್ನಂತೆ. ಇದರಿಂದ ಬೇಸತ್ತ ಪತ್ನಿ ಗಂಡನ ಮನೆ ಬಿಟ್ಟು ತನ್ನ ತವರು ಆಂಧ್ರಪ್ರದೇಶಕ್ಕೆ ಹೊರಟು ಹೋಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಪತಿ ಗೋವಿಂದರಾಜು, ಪತ್ನಿ ಮೊಬೈಲ್‌ಗೆ ತಮ್ಮ ಮೊದಲ ರಾತ್ರಿಯ ಆಶ್ಲೀಲ ವಿಡಿಯೋ ಕಳಿಸಿದ್ದಾನೆ.
ಇದನ್ನ ನೋಡಿ ಗಾಬರಿಯಾದ ಪತ್ನಿ ಗಂಡನಿಗೆ ಕರೆ ಮಾಡಿದಾಗ ಪತಿ ಗೋವಿಂದ ಪತ್ನಿಗೆ ಬೆದರಿಕೆ ಹಾಕಿ ಮತ್ತೆ ವಾಪಸ್ ನನ್ನ ಮನೆಗೆ ಬರಬೇಕು. ನಾನ್ ಹೇಳಿದಂಗೆ ಕೇಳ್ಕೊಂಡು ಇರಬೇಕು. ಇಲ್ಲ ಅಂದ್ರೆ ಇಂತಹ ವಿಡಿಯೋಗಳು ಇನ್ನು ಸಾಕಷ್ಟು ಇವೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ.
ಪತಿಯ ಈ ದುರ್ವತನೆಯಿಂದ ಬೇಸತ್ತ ಪತ್ನಿ, ಪತಿ ಗೋವಿಂದರಾಜು ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಅನ್ವಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


