ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್

0
Spread the love

ಬೆಂಗಳೂರು: ಆರ್​​ಎಂಸಿ ಯಾರ್ಡ್​ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ರಿಲೀಫ್ ಸಿಕ್ಕಿದೆ.  ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್​ಐಟಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ.

Advertisement

ಮಹಿಳೆ ಆರೋಪಕ್ಕೆ ಯಾವ ಸಾಕ್ಷಿಗಳು ಇಲ್ಲ. ಮಹಿಳೆ ಮಾತ್ರೆ ಸೇವಿಸುವ ಬಗ್ಗೆ ರಿಹರ್ಸಲ್ ಮಾಡಲಾಗಿದೆ. 8 ಬಾರಿ ರಿಹರ್ಸಲ್ ಅನ್ನು ಮಹಿಳೆ ಮಾಡಿದ್ದರು. ಅಲ್ಲದೇ ಮಹಿಳೆ ದೇಹದಲ್ಲಿ ಮಾತ್ರೆಯ ಅಂಶ ಇಲ್ಲ. ಹೀಗಾಗಿ ಎಸ್​ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

ಎಸ್​​ಐಟಿಯು ಸಾಕ್ಷ್ಯಧಾರ ಕೊರತೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಮಹಿಳೆ ಮಾತ್ರೆ ಸೇವಿಸುವಾಗ 8 ಬಾರಿ ರಿಹರ್ಸಲ್ ಮಾಡಿರುವುದು ಬೆಳಕಿಗೆ ಬಂದಿದೆ.

ಅಲ್ಲದೇ ಮಹಿಳೆ ದೇಹದಲ್ಲಿ ನಿದ್ದೆ ಮಾತ್ರೆ ಸೇವಿಸಿರುವುದಕ್ಕೆ ದೇಹದಲ್ಲಿ ಯಾವುದೇ ಅಂಶ ಇಲ್ಲ. ಶಾಸಕ ಮುನಿರತ್ನನ ವಿರುದ್ಧ ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ.


Spread the love

LEAVE A REPLY

Please enter your comment!
Please enter your name here