ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆ ನಗರದಲ್ಲಿ ಇರುವ ಆಭರಣ ಅಂಗಡಿಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಜನನಿಬಿಡ ಪ್ರದೇಶದಲ್ಲಿರುವ ಅಂಗಡಿಗೆ ಗ್ರಾಹಕಿ ನೆಪದಲ್ಲಿ ಬಂದ ಆಕೆ, ಅಂಗಡಿಯವರು ತೋರಿಸುತ್ತಿದ್ದ 26 ಗ್ರಾಂ ತೂಕದ ಚಿನ್ನದ ಸರ ಮತ್ತು ನೆಕ್ಲೇಸ್ ಅನ್ನು ತನ್ನ ಬಟ್ಟೆಯೊಳಗೆ ಅಡಗಿಸಿಕೊಂಡಿದ್ದಾಳೆ. ಕಳುವಾದ ಆಭರಣಗಳ ಮೌಲ್ಯ ಸುಮಾರು ₹3,80,000ಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ಅಂಗಡಿಯಿಂದ ಹೊರಬಂದ ತಕ್ಷಣ, ಮಹಿಳೆ ತನ್ನ ಸಹಚರನೊಂದಿಗೆ ಬೈಕ್ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾ ಈ ಕೃತ್ಯದ ದೃಶ್ಯಗಳನ್ನು ಸೆರೆಹಿಡಿದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



