ಬೆಂಗಳೂರು: ಮನೆಕೆಲಸ ಮಾಡ್ತಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಕೆರೆ ಬಳಿ ನಡೆದಿದೆ. ನಜ್ಮಾ ಮೃತ ಬಾಂಗ್ಲಾದೇಶ ಮೂಲದ ಮಹಿಳೆಯಾಗಿದ್ದು, ನಜ್ಮಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
Advertisement
ಕಲ್ಕೆರೆಯ ಡಿಎಸ್ಆರ್ನ ಅಪಾರ್ಟ್ಮೆಂಟ್ನಲ್ಲಿ ಮನೆಗೆಲಸ ಮಾಡುತ್ತಿದ್ದ ನಜ್ಮಾ, ಸುಮನ್ ಎಂಬುವವರನ್ನು ಮದುವೆಯಾಗಿದ್ದರು. 3 ಮಕ್ಕಳ ತಾಯಿಯನ್ನು ದುಷ್ಕರ್ಮಿಗಳು ಕೊಂದು ಬಿಸಾಡಿದ್ದಾರೆ.
ಘಟನೆ ಬಗ್ಗೆ ಪೂರ್ವ ವಲಯದ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಬೆಳಿಗ್ಗೆ 8.45ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆ ಬರುತ್ತೆ. ಇನ್‌ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು, ಬಾಡಿ ಶಿಫ್ಟ್ ಮಾಡಿದ್ದಾರೆ ಎಂದರು.