HomeGadag Newsಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣ

ಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜೀವನದಲ್ಲಿ ನೊಂದ, ತೇಜೋವಧೆಗೆ ಒಳಗಾದ ಮಹಿಳೆಗೆ ಅಭಯಹಸ್ತ ನೀಡಿ ಅವಳಲ್ಲಿ ಮನೋಸ್ಥೈರ್ಯ ತುಂಬುವುದೇ ನೀಜವಾದ ಮಹಿಳಾ ಸಬಲೀಕರಣವಾಗಿದೆ ಎಂದು ಮಹಿಳಾ ಧುರೀಣೆ, ಚಿಂತಕಿ ಸಂಯುಕ್ತಾ ಬಂಡಿ ಹೇಳಿದರು.

ಅವರು ನಗರದ ರೋಟರಿ ಐಕೇರ್ ಸೆಚಿಟರ್‌ನಲ್ಲಿ ಗದಗ ಸಖಿ ಸಹೇಲಿ ಮಹಿಳಾ ಸಂಘಟನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಓರ್ವ ಮಹಿಳೆ ಜೀವನದಲ್ಲಿ ಮುನ್ನಡೆ ಸಾಧಿಸಿದ್ದಾಳೆ ಎಂದರೆ ಕೆಲವು ಮಹಿಳೆಯರು ಸಹಿಸಲಾರರು. ಆಕೆಯ ಬಗ್ಗೆ ತೇಜೋವಧೆಯ ಮಾತುಗಳನ್ನಾಗಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸುವದು ಸಲ್ಲದು. ಮಹಿಳೆಯ ಹಿನ್ನಡೆಗೆ ಮಹಿಳೆಯೇ ಕಾರಣವಾಗಬಾರದು. ಇಂತಹ ಕ್ಷುಲ್ಲಕ ವಿಚಾರಗಳು ಸೀತಾ ಮಾತೆಯನ್ನೂ ಬಿಟ್ಟಿಲ್ಲ, ಶರಣೆ, ಸಾಧಕ ಮಹಿಳೆಯರನ್ನೂ ಬಿಟ್ಟಿಲ್ಲ. ಇವುಗಳನ್ನೆಲ್ಲ ಮೆಟ್ಟಿ ನಿಂತ ದಿಟ್ಟ ಮಹಿಳೆ ಕುಟುಂಬದಲ್ಲಿ, ಸಮಾಜದಲ್ಲಿ ಸಾಧಕ ಮಹಿಳೆ ಆಗಬಲ್ಲಳು ಎಂದರು.

ಸಖಿ ಸಹೇಲಿಯ ಪ್ರಮುಖರಾದ ಡಾ. ನಯನಾ ಭಸ್ಮೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ರೋಟರಿ ಕ್ಲಬ್ ಮಾದರಿಯಲ್ಲಿಯೇ ಈ ಸಂಘಟನೆ ಕಾರ್ಯ ನಿರ್ವಹಿಸಲಿದ್ದು, ಸಮಾಜಮುಖಿ ಕಾರ್ಯ ಮಾಡುವ ಮೂಲಕ ಮಹಿಳಾ ಸಂಘಟನೆ, ಮಹಿಳಾ ಸಬಲೀಕರಣದ ಉದ್ದೇಶಗಳನ್ನು ಹೊಂದಿದೆ ಎಂದರು.

ಸಖಿ ಸಹೇಲಿಯ ಪ್ರಮುಖರಾದ ಜ್ಯೋತಿ ವೆಂಕಟೇಶ, ತಾರಾದೇವಿ ವಾಲಿ ಮತ್ತು ಸುನೀತಾ ಸಿಂತ್ರಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ಭರಮಗೌಡ್ರ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಕಾರ್ಯಗಳು ತಮಗೆ ತೃಪ್ತಿ ತಂದಿವೆ ಎಂದರು. ನೂತನ ಅಧ್ಯಕ್ಷೆ ಸುಮಾ ಪಾಟೀಲ ತಮ್ಮ ಅಧಿಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯ ಯೋಜನೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿದರು.

ಜ್ಯೋತಿ ಭರಮಗೌಡರ ಸ್ವಾಗತಿಸಿದರು, ನಿರ್ಮಲಾ ಪಾಟೀಲ ಹಾಗೂ ವಿದ್ಯಾ ಶಿವನಗುತ್ತಿ ಪರಿಚಯಿಸಿದರು. ಕಾವ್ಯಾ ದಂಡಿನ ನಿರೂಪಿಸಿದರೆ, ಪ್ರಿಯಾಂಕಾ ಹಳ್ಳಿ ವಂದಿಸಿದರು.

ಅಶ್ವಿನಿ ಮಾದಗುಂಡಿ, ಸಾಗರಿಕಾ ಅಕ್ಕಿ, ಶ್ರೀದೇವಿ ಮಹೇಂದ್ರಕರ, ಅನುರಾಧಾ ಬಸವಾ, ಸವಿತಾ ಭರಮಗೌಡರ, ಅನುರಾಧಾ ಅಮಾತಿಗೌಡರ, ಮಂಜುಳಾ ಹಪಗತ್ತಿ, ಚಂದ್ರಕಲಾ ಸ್ಥಾವರಮಠ, ಸುಗ್ಗಲಾ ಯಳಮಲಿ, ಮಧು ಕರಬಿಷ್ಠಿ, ಜಯಶ್ರೀ ಉಗಲಾಟದ, ಸುವರ್ಣಾ ಮದರಿಮಠ, ಜ್ಯೋತಿ ದಾನಪ್ಪಗೌಡರ ಮುಂತಾದವರು ಪಾಲ್ಗೋಂಡಿದ್ದರು.

ಮುಖ್ಯ ಅತಿಥಿ ಅತಿಥಿ ಕವಿತಾ ದಂಡಿನ ಮಾತನಾಡಿ, ಮಹಿಳೆಯರು ಸಮಾಜ ಗುರುತಿಸುವ, ಗೌರವಿಸುವ ಕಾರ್ಯ ಮಾಡಬೇಕು. ಯೋಜನೆ ಮತ್ತು ಗುರಿ ಸ್ಪಷ್ಟವಾಗಿದ್ದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನಡೆಯಿರಿ. ಸಖಿ ಸಹೇಲಿ ಮಹಿಳಾ ಸಂಘಟನೆ ಗದಗ ಪರಿಸರದಲ್ಲಿ ಹೊಸ ಛಾಪು ಮೂಡಿಸಲಿ, ನೂತನ ಪದಾಧಿಕಾರಿಗಳು ದಿಟ್ಟತನದಿಂದ ಕಾರ್ಯ ಮಾಡಿ ಮಹಿಳೆಯರಿಗೆ ಧ್ವನಿಯಾಗಲಿ ಎಂದು ಹಾರೈಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!