Shocking News: ಮಹಿಳೆಯರೇ ಹುಷಾರ್: ಸೀರೆ ಉಟ್ಟರೆ ಬರುತ್ತೆ ಕ್ಯಾನ್ಸರ್!

0
Spread the love

ಭಾರತೀಯರು ಸೀರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ಸೀರೆ ಪ್ರಪಂಚದಾದ್ಯಂತ ಪ್ರೀತಿಪಾತ್ರವಾಗಿದೆ.

Advertisement

ಹೀಗಾಗಿನೇ ಎಷ್ಟೇ ಹೊಸ ಟ್ರೆಂಡಿ ಬಟ್ಟೆ ಬಂದರೂ ಸೀರೆಗೆ ಬೇಡಿಕೆ ಭಾರತದಲ್ಲಿ ಕಡಿಮೆಯಾಗಿಲ್ಲ. ಹಬ್ಬ ಹರಿದಿನಗಳು ಬಂದರೆ ಬಹಳ ಉತ್ಸಾಹದಿಂದ ಮಹಿಳೆಯರು ಸೀರೆ ಉಡುತ್ತಾರೆ. ಆದರೆ ಇತ್ತೀಚಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಸೀರೆಯಿಂದ ಕ್ಯಾನ್ಸರ್ ಬಂದಿರುವುದು ವರದಿಯಾಗಿದೆ. ಅದು ಹೇಗೆ ಎಂದು ನೋಡೋಣ.

ಮಹಿಳೆಯರು ವಿವಿಧ ರೀತಿಯ ಕ್ಯಾನ್ಸರ್ ನಿಂದ ಇತ್ತೀಚೆಗೆ ಬಳಲುತ್ತಿದ್ದಾರೆ. ಇದೀಗ ಮಹಿಳೆಯರು ಬೆಚ್ಚಿಬೀಳುವ ವರದಿಯೊಂದು ಹೊರಬಿದ್ದಿದೆ. ಆದ್ದರಿಂದ ಇನ್ಮುಂದೆ ಮಹಿಳೆಯರು ಡ್ರೆಸ್ಸಿಂಗ್ ವಿಚಾರದಲ್ಲೂ ಎಚ್ಚರ ವಹಿಸದಿದ್ರೆ ಕ್ಯಾನ್ಸರ್‌‌ ಬರಬಹುದು ಎನ್ನುತ್ತಾರೆ ವೈದ್ಯರು.

ಇತ್ತೀಚೆಗೆ, ಸೀರೆ ಧರಿಸುವ ಮಹಿಳೆಯರಿಗೆ ಹೊಸ ರೀತಿಯ ಪೆಟಿಕೋಟ್ ಕ್ಯಾನ್ಸರ್ ಬರಬಹುದು ಎಂದು ಅಧ್ಯಯನಗಳು ತೋರಿಸಿವೆ. ವಾರ್ಧಾದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಬಿಹಾರದ ಮಧುಬನಿ ವೈದ್ಯಕೀಯ ಕಾಲೇಜಿನ ವೈದ್ಯರು ನಡೆಸಿದ ಇತ್ತೀಚಿನ ಸಂಶೋಧನೆಯ ಪ್ರಕಾರ, ಸೀರೆ ಧರಿಸಿದ ಮಹಿಳೆಯರು ಧರಿಸುವ ಸ್ಕರ್ಟ್ ಅನ್ನು ಬಿಗಿಯಾಗಿ ಕಟ್ಟುವುದರಿಂದ ಈ ಕ್ಯಾನ್ಸರ್ ಬರಬಹುದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಸೀರೆ ಜೊತೆಗೆ ಮಹಿಳೆಯರು ಪೆಟಿಕೋಟ್‌ ಧರಿಸುತ್ತಾರೆ. ಇದು ಸೀರೆ ಜೊತೆಗೆ ಉತ್ತಮ ಆಕಾರವನ್ನು ನೀಡುತ್ತದೆ. ಇನ್ನು ಇದನ್ನು ಕಟ್ಟಲೆಂದು ಮೇಲ್ಭಾಗದಲ್ಲಿ ಹಗ್ಗವೊಂದನ್ನು ನೀಡುತ್ತಾರೆ. ಅನೇಕ ಮಹಿಳೆಯರು ಈ ಹಗ್ಗವನ್ನು ತಮ್ಮ ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ.

ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟಿದರೆ, ಇದರಲ್ಲಿರುವ ಹಗ್ಗ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಈ ಕಾರಣದಿಂದಾಗಿ, ಚರ್ಮವು ಕೆಂಪು ಮತ್ತು ಊದಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಗುಳ್ಳೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ಅಧ್ಯಯನವು ಈ ಗುಳ್ಳೆಗಳು ಮತ್ತು ಹುಣ್ಣುಗಳು ಕ್ಯಾನ್ಸರ್‌‌ಗೆ ಕಾರಣವಾಗಬಹುದು ಎಂದು ಹೇಳಿದೆ. ಈ ಅಧ್ಯಯನವನ್ನು ಬ್ರಿಟಿಷ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ.

ಒಮ್ಮೆ ಈ ರೋಗವನ್ನು ‘ಸಾರಿ ಕ್ಯಾನ್ಸರ್’ ಎಂದು ಕರೆಯಲಾಯಿತು. ಆದರೆ ಹೆಚ್ಚಿನ ಸಂಶೋಧನೆಯ ನಂತರ, ಇದಕ್ಕೆ ಮುಖ್ಯ ಕಾರಣ ಸೀರೆಯಲ್ಲ, ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟುವ ಅಭ್ಯಾಸ ಎಂದು ಕಂಡುಬಂದಿದೆ. ಆದ್ದರಿಂದಲೇ ಇದನ್ನು ಈಗ ‘ಪೆಟಿಕೋಟ್ ಕ್ಯಾನ್ಸರ್’ ಎಂದು ಕರೆಯುತ್ತಾರೆ.

ಸೀರೆಯನ್ನು ಮುಂಭಾಗದಿಂದ ಕಟ್ಟುವ ಅಭ್ಯಾಸವಿರುವ 70 ವರ್ಷದ ಮಹಿಳೆಯೊಬ್ಬರ ಸೊಂಟದ ಬಳಿ ಬಲಭಾಗದಲ್ಲಿ ಹುಣ್ಣು ಕಾಣಿಸಿಕೊಂಡಿದೆ. 18 ತಿಂಗಳು ಕಳೆದರೂ ಅದು ಕಡಿಮೆಯಾಗಿಲ್ಲ. ಆ ಭಾಗದ ಚರ್ಮವೂ ಬಣ್ಣಬಣ್ಣದಿಂದ ಕೂಡಿತ್ತು ಎನ್ನಲಾಗಿದೆ. ವೈದ್ಯರು ಚರ್ಮದ ಸಣ್ಣ ತುಂಡನ್ನು
ತೆಗೆದುಕೊಂಡು ಪರೀಕ್ಷಿಸಿದಾಗ ಅವರಿಗೆ ಮಾರ್ಜೋಲಿನ್ ಅಲ್ಸರ್ ಎಂಬ ಚರ್ಮದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.

ಇದನ್ನು “ಸ್ಕ್ವಾಮಸ್ ಸೆಲ್ ಕಾರ್ಸಿನೋಮ” ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ದೀರ್ಘಕಾಲದಿಂದ ಒಂದೇ ಜಾಗದಲ್ಲಿ ದದ್ದುಗಳು, ಹುಣ್ಣುಗಳಿದ್ದರೆ ಬರುತ್ತದೆ. ಹಿಂದಿನ ಸುಟ್ಟಗಾಯಗಳು, ಪಾದದ ಹುಣ್ಣುಗಳು ಅಥವಾ ಸೋಂಕುಗಳು ಇದ್ದಲ್ಲಿ ಮಾರ್ಜೋಲಿನ್ ಹುಣ್ಣುಗಳು ಹೆಚ್ಚಾಗಿ ರೂಪುಗೊಳ್ಳುತ್ತವೆ.

ಪೆಟಿಕೋಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟುವುದು ಹೊಟ್ಟೆ ಮತ್ತು ಸೊಂಟದ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತದೆ. ಈ ಘರ್ಷಣೆಯು ಚರ್ಮವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಗಾಯಗಳು ಅಥವಾ ಹುಣ್ಣುಗಳನ್ನು ಉಂಟುಮಾಡಬಹುದು. ಇವುಗಳಿಗೆ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಅಪಾಯವಿದೆ.

 


Spread the love

LEAVE A REPLY

Please enter your comment!
Please enter your name here