ಬೆಂಗಳೂರು: ಹನುಮಂತನಗರದಲ್ಲಿ ಹೂ ಮಾರಾಟದ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಜಗಳ ನಡೆದ ಘಟನೆ ಬೆಳಕಿಗೆ ಬಂದಿದೆ.
ಅಂಗಡಿ ಮುಂದೆ ಮಲ್ಲಿಗೆ ಹೂ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದ ಮತ್ತೊಬ್ಬ ಮಹಿಳೆ ಕಿರಿಕ್ ಆರಂಭಿಸಿದ್ದಾಳೆ.
ವಿವಾದ ತೀವ್ರಗೊಂಡ ವೇಳೆ, ಇನ್ನೋರ್ವ ಮಹಿಳೆ ಮಲ್ಲಿಗೆ ಹೂವನ್ನು ರಸ್ತೆಗೆ ಬಿಸಾಕಿ ಉದ್ಧಟತನ ತೋರಿದ್ದಾಳೆ. “ಪೊಲೀಸರಿಗಾದರೂ ಹೇಳು, ಯಾರಿಗಾದರೂ ಹೇಳು” ಎಂದು ರಂಪಾಟ ನಡೆಸಿದ ದೃಶ್ಯಗಳು ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿವೆ.
ಈ ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.



