ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾಳೆ

0
womens day
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾಳೆ. ಮಹಿಳೆ ಇಂದು ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕೃಷಿ, ರಾಜಕೀಯ, ಉದ್ಯಮ ಮುಂತಾದ ಕ್ಷೇತ್ರದಲ್ಲಿ ಪುರುಷರಿಗೆ ಸಮನಾಗಿ, ಇನ್ನೂ ಒಂದು ಹೆಜ್ಜೆ ಮುನ್ನಡೆ ಸಾಧಿಸಿದ್ದಾಳೆ.
ಕುಟುಂಬದಲ್ಲಿ ಪ್ರೋತ್ಸಾಹ, ಸಾಧಿಸಬೇಕೆಂಬ ಛಲ, ಅವಕಾಶಗಳು, ಶಿಕ್ಷಣ ಮತ್ತು ಮೀಸಲಾತಿಯು ಎತ್ತರದ ಸ್ಥಾನವನ್ನು ತಲುಪಿಸಿ ಸಾಧಕ ಮಹಿಳೆಯನ್ನಾಗಿ ಮಾಡಿವೆ ಎಂದು ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ಆನಂದ ಪೋತ್ನೀಸ್ ಅಭಿಪ್ರಾಯಪಟ್ಟರು.
ಅವರು ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸೌಭಾಗ್ಯ ಮಹಿಳಾ ಬ್ಯಾಂಕ್‌ನ ಚೇರಮನ್ ವೀಣಾ ಪೋತ್ನೀಸ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಸಾಧಕ ಮಹನೀಯರನ್ನು ಅಶ್ವಿನಿ ನೀಲಗುಂದ, ಅನಿತಾ ಹೆಬಸೂರ, ಮಂಜುಳಾ ಶಿವಪ್ಪಗೌಡ್ರ, ರೂಪಾ ಉತ್ತರಕರ, ವೀಣಾ ಸುಲಾಖೆ, ವಿಜಯಲಕ್ಷ್ಮಿ ಹೊಳಗುಂದಿ, ಅಪರ್ಣಾ ತೋಟದ ಪರಿಚಯಿಸಿದರು.
ವೇದಿಕೆಯ ಮೇಲೆ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ, ಖಜಾಂಚಿ ರಾಜು ಮಲ್ಲಾಡದ, ಸುರೇಖಾ ಮಲ್ಲಾಡದ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಗದಗ-ಬೆಟಗೇರಿ ಲಯನ್ ಲೇಡಿಸ್ ಕ್ಲಬ್‌ನ ಅಧ್ಯಕ್ಷೆ ಸಾವಿತ್ರಿ ಶಿಗ್ಲಿ ವಹಿಸಿ ಸರ್ವರನ್ನು ಸ್ವಾಗತಿಸಿದರು. ಕ್ಷಿತಿಜ್ ಸುಲಾಖೆ ಪ್ರಾರ್ಥಿಸಿದರು. ಲಯನ್ ಲೇಡಿಸ್ ಕ್ಲಬ್‌ನ ಕಾರ್ಯದರ್ಶಿ ಅಮೃತಾ ವಾರಕರ್ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್‌ನ ಸರ್ವ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸಾಧಕ ಮಹಿಳೆಯರಾದ ಮಂಗಳಾ ನೀಲಗುಂದ(ಕೃಷಿ) ಡಾ.ಅನುಪಮಾ ಪಾಟೀಲ(ವೈದ್ಯಕೀಯ), ಕವಿತಾ ಬೇಲೇರಿ(ವಿಕಲಚೇತನ ಮಕ್ಕಳ ಸೇವೆ), ಗಿರಿಜಾ ಬೇವಿನಕಟ್ಟಿ(ಶಿಕ್ಷಣ), ವೀಣಾ ಪೋತ್ನೀಸ್(ಬ್ಯಾಂಕಿಂಗ್), ಸಂಜನಾ ಚಿಕ್ಕನಗೌಡ್ರ(ಕ್ರೀಡೆ), ನೇತ್ರಾ ಸುಲ್ತಾನಪೂರ(ಪ್ರತಿಭಾನ್ವಿತ ವಿದ್ಯಾರ್ಥಿನಿ) ಇವರುಗಳನ್ನು ಸನ್ಮಾನಿಸಲಾಯಿತು.

Spread the love
Advertisement

LEAVE A REPLY

Please enter your comment!
Please enter your name here