ವಿಜಯಸಾಕ್ಷಿ ಸುದ್ದಿ, ಗದಗ: ಆರ್ಥಿಕ ಸದೃಢತೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸ್ತ್ರೀ ಗುಂಪುಗಳ ಮೂಲಕ ಮಹಿಳೆಯರ ಸಬಲೀಕರಣದ ಧ್ಯೇಯದೊಂದಿಗೆ ಕಾರ್ಯೋನ್ಮುಖರಾಗಬೇಕು. ಮಹಿಳೆಯರು ಆರ್ಥಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯದೊಂದಿಗೆ ಸ್ತ್ರೀಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ನಡೆಯಬೇಕಾಗಿದೆ ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಅವರು ಗದುಗಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗದುಗಿನ ಪಂಚಾಕ್ಷರಿ ನಗರದ ನಾಗಪ್ಪನ ಕಟ್ಟಿಯ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಶಿಕ್ಷಣ ಕುರಿತು ಮಾತನಾಡಿದರು.
ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬರಬೇಕು. ಅಕ್ಷರ ಕಲಿತ ನಾರಿ ಮನೆಗೆಲ್ಲ ದಾರಿ. ತಾನು ಕಲಿತು ಕುಟುಂಬವನ್ನೇ ಅಕ್ಷರಸ್ಥರನ್ನಾಗಿಸುವ ಮಾಡುವ ಕೆಲಸ ನಡೆಯಬೇಕು. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿರಿಸಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು ಎಂದರು.
ಲಕ್ಷ್ಮಿ ಅಂಗಡಿ ಪ್ರಾರ್ಥಿಸಿದರು. ಲಕ್ಷ್ಮಿ ಅರಮನಿ ಸ್ವಾಗತಿಸಿದರು. ಹೇಮಾ ಹೆಬಸೂರ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಕಡೆಮನಿ ವಂದಿಸಿದರು. ವಿಜಯಲಕ್ಷ್ಮಿ ಹೂಗಾರ, ಶಕುಂತಲಾ ಖಾನಪ್ಪಗೌಡ್ರ, ಬಸಮ್ಮ ಅಂಗಡಿ, ಲಲಿತಾ ಹಿರೇಮಠ, ಗಂಗಮ್ಮ ಗೋಧಿ, ಅನುಪಮಾ ಕೋಳಿವಾಡ, ರೇಣುಕಾ ಬೆಳವಟಗಿ, ಸುರೇಖಾ ಹಡಗಲಿ, ಲೀಲಾವತಿ ಕಿರೇಸೂರ, ಗಂಗಮ್ಮ ನರ್ತಿ, ಶೈಲಜಾ ಕೌತಾಳ, ನಿರ್ಮಲಾ ವಡ್ಡಟ್ಟಿ, ವಿಜಯಾ ಪೂಜಾರ, ಅಂಬಿಕಾ ಪುಲಾರೆ, ಗಾಯತ್ರಿ ಗದುಗಿನಮಠ ಮುಂತಾದವರು ಉಪಸ್ಥಿತರಿದ್ದರು.