ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಶಂಕರ ದೇವಸ್ಥಾನದಲ್ಲಿ ನಡೆಯುತ್ತಿರುವ ಯೋಗಿರಾಜ ಮಹಾರಾಜರ ಆರಾಧನಾ ಮಹೋತ್ಸವದಂಗವಾಗಿ ಮಹಿಳೆಯರು ಹಾಡಿದ ಭಜನಾ ಹಾಡುಗಳು ಗಮನ ಸೆಳೆದವು.
ಗದಗ ಕರಿ ಭಜನಾ ಮಂಡಳ ಕರಿಯಮ್ಮನ ಕಲ್ಲು ಬಡಾವಣೆ, ಹುಬ್ಬಳ್ಳಿಯ ಶಾರದಾ ಮಹಿಳಾ ಕುಂಜ ಶಂಕರಮಠ, ಹಳೆ ಹುಬ್ಬಳ್ಳಿಯ ಭವಾನಿ ಶಂಕರ ಭಜನಾ ಮಂಡಳ ಹಾಗೂ ವಿಭಾವರಿ ಭಜನಾ ಮಂಡಳ, ಗಣೇಶ ಪೇಟೆ ಹುಬ್ಬಳ್ಳಿಯ ಮಹಿಳೆಯರು ಹಾಡಿದ ಹಾಡುಗಳು ಗಮನ ಸೆಳೆದವು.
ನಂತರ ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಹಾಗೂ ಶ್ರೀಕಾಂತ ಹೂಲಿ ಸಂಗಡಿಗರು ಹಾಡಿದ ಭಕ್ತಿ ಸಂಗೀತ ಆಕರ್ಷಿಸಿತು. ಉಮೇಶ ಪಾಟೀಲ ತಬಲಾ ಸಾಥ್, ಮೋಹನ ಮಾಗಡಗೇರಿ ಹಾರ್ಮೋನಿಯಂ ಸಾಥ್ ನೀಡಿದರು. ಇದಕ್ಕೂ ಪೂರ್ವ ಶಂಕರ ಭಟ್ಟ ಜೋಶಿಯವರ ನೇತೃತ್ವದಲ್ಲಿ ಹುಬ್ಬಳ್ಳಿ ಹಾಗೂ ಗದಗ ನಗರದ ಪೊರೋಹಿತರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಯೋಗಿರಾಜ ಭಕ್ತ ಮಂಡಳಿಯ ಅಧ್ಯಕ್ಷ ನಾಗಾರಾಜ ಕುಲಕರ್ಣಿ, ಉಪಾದ್ಯಕ್ಷ ಆರ್.ಡಿ. ದೇಸಾಯಿ, ದತ್ತಾತ್ರೇಯ ಜೋಶಿ ಉಪಸ್ಥಿತರಿದ್ದರು.



