ಇನ್ನರ್‌ವ್ಹೀಲ್ ಕ್ಲಬ್‌ನಲ್ಲಿ ಮಹಿಳಾ ದಿನಾಚರಣೆ

0
womens day
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಂಜೆತನಕ್ಕೆ ಸ್ತ್ರೀಯರ ತೊಂದರೆಗಳು ಮಾತ್ರವೇ ಕಾರಣವಲ್ಲ, ಪುರಷರಲ್ಲಿಯೂ ತೊಂದರೆಗಳಿರಬಹುದು ಎಂದು ಸ್ತ್ರೀರೋಗ ತಜ್ಞೆ ಡಾ. ಅನುಪಮಾ ಪಾಟೀಲ ಅಭಿಪ್ರಾಯಪಟ್ಟರು.

Advertisement

ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯಲ್ಲಿ ಬಂಜೆತನಕ್ಕೆ ನಾನಾ ಕಾರಣಗಳಿರಬಹುದು. ಅದನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಬಹುದು. ಈಗಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ ಹಾಗೂ ಇತರ ಜವಾಬ್ದಾರಿಯಿಂದ ತಡವಾಗಿ ಮದುವೆ ಆಗುವುದರಿಂದಲೂ ಗರ್ಭ ನಿಲ್ಲುವುದಕ್ಕೆ ತೊಂದರೆಯಾಗಬಹುದು ಎಂದರು.

ಇನ್ನವ್ಹೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶುಭಾಶಯದೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಕಳೆದ ಎರಡು ವರ್ಷಗಳಲ್ಲಿ 200 ಮಹಿಳೆಯರ ಮಡಿಲು ತುಂಬಿದ ಡಾ. ಅನುಪಮಾ ಪಾಟೀಲರನ್ನು ಸನ್ಮಾನಿಸಲಾಯಿತು.

ಇನ್ನರ್‌ವ್ಹೀಲ್ ಸದಸ್ಯೆ ಪದ್ಮಾ ಕಬಾಡಿ, ಬಾಲ ಪ್ರತಿಭೆ ಹರ್ಷಿತಾ ಪುಂಗಲಿಯಾ, ವೈಷ್ಣವಿ ಇಮ್ಮತಿಯವರಿಗೆ ಶುಭ ಹಾರೈಸಿ ಸನ್ಮಾನಿಸಲಾಯಿತು.

ಇನ್ನೋರ್ವ ಇನ್ನರವ್ಹೀಲ್ ಮಾಜಿ ಸದಸ್ಯೆ ಡಾ. ಶಾಂತಾಬಾಯಿ ಭೂಮರಡ್ಡಿಯವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಮೀನಾಕ್ಷಿ ಸಜ್ಜನರ ಕಾಲರ್ ಧಾರಣೆ ಮಾಡಿದರು. ಪ್ರಾಂಭದಲ್ಲಿ ಜ್ಯೋತಿ ಭರಮಗೌಡರ ಪ್ರಾರ್ಥನೆ ಹೇಳಿದರು. ಅತಿಥಿಗಳ ಪರಿಚಯವನ್ನು ಜ್ಯೋತಿ ಭರಮಗೌಡರ, ನಂದಾ ಬಾಳೆಹಳ್ಳಿಮಠ, ರೇಣುಕಾ ಅಮಾತ್ಯ, ಸುಮಾ ಪಾಟೀಲ ಮಾಡಿದರು. ಲಕ್ಕಿ ಲೇಡಿ ರಜನಿ ಪಾಟೀಲ, ವಿದ್ಯಾ ಶಿವನಗುತ್ತಿ, ಕಾರ್ಯದರ್ಶಿ ಹೇಮಲತಾ ಪುಂಗಾಲಿಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here