ಮಹಿಳಾ ಸುರಕ್ಷತೆ ಅತ್ಯಗತ್ಯ

0
panchamasali
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವಳಿಗೆ ಅಭದ್ರತೆ ಕಾಡುತ್ತಿದೆ. ಮಹಿಳಾ ಸುರಕ್ಷತೆಯು ಅತ್ಯಗತ್ಯವಾಗಿದೆ ಎಂದು ಹಿರಿಯರಾದ ನೀಲಮ್ಮ ಹುಣಶೀಕಟ್ಟಿ ಹೇಳಿದರು.
ಅವರು ನಗರದ ಹಾಲಕೇರಿ ಶಾಖಾ ಮಠದಲ್ಲಿ ಗದಗ ಪಂಚಮಸಾಲಿ ಸಮಾಜದ ಮಹಿಳಾ ಘಟಕ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಮಾಜದ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲತಃ ಪಂಚಮಸಾಲಿ ಸಮುದಾಯದವರು ಒಕ್ಕಲಿಗರು, ರೈತಾಪಿ ಬದುಕನ್ನು ನಡೆಸುತ್ತ ಇಂದು ದೊಡ್ಡ ದೊಡ್ಡ ಉದ್ಯಮಿಗಳಾಗಿ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಸ್ತೂರಿ ದಾನಪ್ಪಗೌಡ್ರ ಮಾತನಾಡಿ, ಮಹಿಳೆಯರು ಮಾಡುವ ಕೆಲಸದಲ್ಲಿ ಕಾಯಕ ನಿಷ್ಠರು. ಹೀಗಾಗಿ ಹಠ ಬಿಡದಂತೆ ಅವರು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಶ್ರೀ ಉಗಲಾಟ, ಸಮಾಜದ ಉನ್ನತಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆಯೊಂದನ್ನು ರೂಪಿಸಿ ಅದನ್ನು ಯಶಸ್ಸುಗೊಳಿಸಲಾಗುವದು ಎಂದರು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಮಾ ಪಾಟೀಲ ವಚನ ನೃತ್ಯ ಹಾಗೂ ಭಾರ್ಗವಿ ಪರ್ವತಗೌಡ್ರ ಕಿತ್ತೂರ ಚೆನ್ನಮ್ಮನ ಏಕಪಾತ್ರಾಭಿನಯ, ಶಾರದಾ ಕರಮುಡಿ ಅವರ ವಚನ ಗಾಯನ ಗಮನ ಸೆಳೆಯಿತು.
ವಿಜಯಶ್ರೀ ಇಳಕಲ್ಲ ಪ್ರಾರ್ಥಿಸಿದರು. ಜಯಶ್ರೀ ಪಾಟೀಲ ಸ್ವಾಗತಿಸಿದರು. ಶಿವಲೀಲಾ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ದಾನಪ್ಪಗೌಡ್ರ, ಸುಜಾತಾ ಗುಡಿಮನಿ, ಗಂಗಾ ತಂಗೂಡಿ, ದೀಪಾ ಉಗಲಾಟ ಪರಿಚಯಿಸಿದರು. ಶಾಂತಾ ತುಪ್ಪದ ನಿರೂಪಿಸಿದರು. ರೇಣುಕಾ ಅಮಾತ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಮಲಾ ಪರ್ವತಗೌಡ್ರ, ರೇಖಾ ಕಲ್ಲನಗೌಡ್ರ, ಶಾರದಾ ಬೊಮ್ಮಸಾಗರ, ಪ್ರೇಮಾ ಕುರಡಗಿ, ಉಮಾ ಕವಳಿಕಾಯಿ, ನಿರ್ಮಲಾ ಪಾಟೀಲ, ಲಲಿತಾ ಕುರಡಗಿ, ಜ್ಯೋತಿ ಉಗಲಾಟ, ಸುಜಾತಾ ತಂಗೂಡಿ, ನಿರ್ಮಲಾ ಮಟ್ಟಿ, ಸುಧಾ ಹುಣಶೀಕಟ್ಟಿ, ಮಂಜುಳಾ ತಂಗೂಡಿ, ಸಾಗರಿಕಾ ಅಕ್ಕಿ, ಶುಭಾ ಕುಂದಗೋಳ, ಗೀತಾ ಉಗಲಾಟ ಸೇರಿದಂತೆ ಪಂಚಮಸಾಲಿ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಪಾರ್ವತೆಮ್ಮ ಸಂಕಣ್ಣವರ, ನೀಲಮ್ಮ ಹುಣಶೀಕಟ್ಟಿ, ಕಸ್ತೂರಿ ದಾನಪ್ಪಗೌಡ್ರ, ಲಲಿತಾ ಪಾಟೀಲ ಹಾಗೂ ಸಾಧಕ ಮಹಿಳೆಯರಾದ ಕವಿತಾ ದಂಡಿನ, ವಿಜಯಲಕ್ಷ್ಮಿ ದಿಂಡೂರ, ನಾಗರತ್ನಾ ಮಾರನಬಸರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Spread the love
Advertisement

LEAVE A REPLY

Please enter your comment!
Please enter your name here