ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ನಾಗರಾಜ ಖಂಡು ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮವ್ವ ರಾಮಜೀ ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಮಕ್ಕಳ ಸುರಕ್ಷತೆ ಹಾಗೂ ಶಾಲಾ ಅಭಿವೃದ್ಧಿಗೆ ಶ್ರಮ ವಹಿಸಬೇಕೆಂದು ಸಲಹೆ ನೀಡಿದರು. ಅಥಿತಿಯಾಗಿ ಆಗಮಿಸಿದ್ದ ಗ್ರಾ.ಪಂ ಸದಸ್ಯ ಪೀರಸಾಬ ನದಾಫ್ ಮಾತನಾಡಿ, ಮಕ್ಕಳ ಗುಣಾತ್ಮಕ ಕಲಿಕೆಗೆ ಹೆಚ್ಚು ಗಮನ ಹರಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಅನ್ನಪೂರ್ಣ ರಿತ್ತಿ, ಅನಸಮ್ಮ ಅಂಬಕ್ಕಿ, ರಜಿಯಾ ಬೇಗಂ ತಹಸೀಲ್ದಾರ, ರಮೇಶ ಭಾವಿ, ವಿರೂಪಾಕ್ಷಪ್ಪ ಬೆಟಗೇರಿ, ಅನ್ನಪೂರ್ಣ ಪೂಜಾರ, ಅಡಿವೆವ್ವ ಅಬ್ಬಿಗೇರಿ, ಫಕ್ಕೀರಮ್ಮ ಬೇಲೇರಿ ಉಪಸ್ಥಿತರಿದ್ದರು.
ಪಿ.ಡಿ.ಒ ಅಮೀರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ನೂತನ ಸದಸ್ಯರಾಗಿ ಚಂದ್ರಶೇಖರ ಬಣವಿ, ವೆಂಕಟೇಶ ದೊಂಗಡೆ, ನಿಂಗಯ್ಯಕಲ್ಮಠ, ಶಿವಾನಂದ ಅಬ್ಬಿಗೇರಿ, ಶಿವಪ್ಪ ಅಭ್ಬಿಗೇರಿ, ಹನುಮಂತ ಬಾರಕೇರ, ಯಾಶಿನಸಾಬ ಮುಲ್ಲಾ, ಜಂದಿಸಾಬ ತಹಸೀಲ್ದಾರ, ರೇಣುಕಾ ಹಿರೇಹಾಳ, ಜುಲೇಸಾಬ ದೌಲತ್ತರ, ಲಕ್ಷ್ಮೀ ಹಿರೇಹಾಳ, ಪಾರ್ವತಿ, ಕಲ್ಲೂರ, ಲಕ್ಷ್ಮೀ ಗಡಗಿ, ನಿರ್ಮಲಾ ಛಬ್ಬರಭಾವಿ, ಗಂಗಮ್ಮ ಹರ್ತಿ, ಭಾಗ್ಯ ಚವ್ಹಾಣ, ಆಯ್ಕೆಯಾದರು. ನೋಡಲ್ ಅಧಿಕಾರಿಯಾಗಿ ಹುಡೇದಮನಿ ಕಾರ್ಯ ನಿರ್ವಹಿಸಿದರು. ಸಿ.ಆರ್.ಪಿ ಮೀರಾ ನಾಯಕ ಸಮಿತಿಯ ರಚನಾ ನಿಯಮಾವಳಿಗಳನ್ನು ತಿಳಿಸಿದರು. ಶಾಲೆಯ ಪ್ರಧಾನಗುರು ಕಂಬಳಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.