ಬೆಂಗಳೂರು:- ಕೆಲಸದ ಒತ್ತಡ ಹಾಗೂ ಅಧಿಕಾರಿಗಳ ಕಿರುಕುಳ ತಾಳಲಾರದೆ KSDL ಅಧಿಕಾರಿ ನೇಣಿಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Advertisement
ಕೆ ಎಸ್ ಡಿ ಎಲ್ ನಲ್ಲಿ ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಸಿರಿಯೂರ್ ಮೃತ ಅಧಿಕಾರಿ. ಕೈಯಲ್ಲಿಯೇ ಡೆತ್ ನೋಟ್ ಹಿಡಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಇನ್ನೂ ಡೆತ್ ನೋಟ್ ನಲ್ಲಿ KSDL ನ ಹಿರಿಯ ಅಧಿಕಾರಿಗಳ ಹೆಸರನ್ನು ಉಲ್ಲೇಖ ಮಾಡಲಾಗಿದ್ದು, ಕೆಲಸದ ಒತ್ತಡ ಹಾಗೂ ಕಿರುಕುಳ ಎಂದು ಆರೋಪಿಸಿದ್ದಾರೆ. ಇನ್ನೂ ಘಟನೆ ನಡೆದು 24 ತಾಸುಗಳಾದರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.