HomeGadag Newsಬೇಡಿಕೆ ಈಡೇರದಿದ್ದಲ್ಲಿ ಕೆಲಸ ಸ್ಥಗಿತ

ಬೇಡಿಕೆ ಈಡೇರದಿದ್ದಲ್ಲಿ ಕೆಲಸ ಸ್ಥಗಿತ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕೇಂದ್ರ ಕಚೇರಿ ಚಿತ್ರದುರ್ಗ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯ ಶಾಖೆಯ ಅಧ್ಯಕ್ಷರಾದ ಸಿ.ಆರ್. ಹಾದಿಮನಿ ಹಾಗೂ ಜಿಲ್ಲಾಧ್ಯಕ್ಷ ಹೇಮೇಶ ಯಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ ಎಫ್.ಪೂಜಾರ, ಗೌರವ ಅಧ್ಯಕ್ಷ ನಾಗೇಶ ಬಳ್ಳಾರಿ ಇವರುಗಳ ನೇತೃತ್ವದಲ್ಲಿ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿ.ಆರ್. ಹಾದಿಮನಿ ಮಾತನಾಡಿ, ರಾಜ್ಯ ಪೌರ ನೌಕರರ ಸಂಘದ ನಿರ್ದೇಶನದಂತೆ ಗದಗ ಜಿಲ್ಲೆಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಿಂದ 12-04-2025ರಿಂದ 26-05-2025ರವರೆಗೆ ಸಾರ್ವಜನಿಕರಿಗೆ ತೊಂದರೆಯಾಗದAತೆ 45 ದಿನಗಳವರೆಗೆ ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುತ್ತಾ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ ನಿಗದಿತ ಅವಧಿಯಲ್ಲಿ ಪೌರನೌಕರರ ಬೇಡಿಕೆಗಳು ಈಡೇರದೇ ಇದ್ದಲ್ಲಿ ಕಚೇರಿ ಕೆಲಸಗಳನ್ನು ಹಾಗೂ ಸ್ವಚ್ಛತೆ ಕೆಲಸವನ್ನು, ನೀರು ಸರಬರಾಜು ಮತ್ತು ಬೀದಿ ದೀಪ ನಿರ್ವಹಣೆಯನ್ನು ಸ್ಥಗಿತಗೊಳಿಸಿ ಮೇ 27ರಿಂದ ಅನಿರ್ದಿಷ್ಟ ಕಾಲ ಮುಷ್ಕರ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಶೇಖಪ್ಪ ತಮ್ಮಣ್ಣವರ, ವಿರೂಪಾಕ್ಷಪ್ಪ ರಾಮಗಿರಿ, ಸಣ್ಣರಾಮಪ್ಪ ಬಳ್ಳಾರಿ, ವೆಂಕಟೇಶ ಬಳ್ಳಾರಿ, ಅರವಿಂದ ಕುರ್ತಕೋಟಿ, ಸಣ್ಣಪ್ಪ ಬೋಳಮ್ಮನವರ, ಪಂಚಾಕ್ಷರಿ ದೊಡ್ಡಮನಿ, ಆಂಜನೇಯ ಪೂಜಾರ, ಶಿವು ಜಂಬಲದಿನ್ನಿ, ವಿಶ್ವನಾಥ ದೊಡ್ಡಮನಿ, ಲಕ್ಷ್ಮಣ ಕೋಟ್ನಿಕಲ್, ಶ್ರೀಪಾದ ಹೊಸಳ್ಳಿ, ನಾರಾಯಣ ಬಳ್ಳಾರಿ, ಮಂಜು ನರಗುಂದ, ರಮೇಶ ಬಾರಕೇರ, ಪರಶುರಾಮ ಸಂಗಾಪೂರ, ಮಲ್ಲಿಕಾರ್ಜುನ ನಾವಳ್ಳಿ, ಎಫ್.ಬಿ. ಬೆನ್ನಾಮಟ್ಟಿ, ಟಿ.ಟಿ. ಉಪ್ಪಾರ, ಮೈಲಾರಪ್ಪ ಬಂಡಿವಾಡ, ರಂಗನಾಥ ಖೋಣಿ, ರಾಜು ಆರಟ್ಟಿ, ರಿಯಾಜ್ ಬೊದ್ಲೆಖಾನ, ಗುರು ಒಡೆಯರ, ರಾಘವೇಂದ್ರ ಅಕ್ಕಿ, ರಾಮು ಕೋಟ್ನಿಕಲ್, ದುರಗಪ್ಪ ಪೂಜಾರ, ಶಿವಲಿಂಗಪ್ಪ ಸೋಮಪೂರ, ಸಂಗವ್ವ ಸೋಮಪೂರ, ಮಂಜುಳಾ ಯಗ್ಗಪಲ್ಲೆ, ಶಂಕರವ್ವ ಹರಿಜನ ಸೇರಿದಂತೆ ಪೌರಕಾರ್ಮಿಕರು, ಲೋರ್ಸ್, ಘನತಾಜ್ಯ ವಾಹನ ಚಾಲಕರು, ಕ್ಲೀರ್ಸ್, ಸೂಪರವೈಸರ್, ನೀರು ಸರಬರಾಜು ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!