ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾರ್ಯಾಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ವಿಭಾಗದಲ್ಲಿ ಪಿ.ಸಿ.ಬಿ ವಿನ್ಯಾಸ ಮತ್ತು ಪ್ರೋಟೋಟೈಪಿಂಗ್ ಕುರಿತು ಎರಡು ದಿನಗಳ ಕಾರ್ಯಾಗಾರ ಜರುಗಿತು.

Advertisement

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಆರ್‌ಲಾಜಿಕ್ಸ್ ನಿರ್ದೇಶಕ ರಾಕೇಶ ಪಾಲ್ಗೊಂಡು ಮಾತನಾಡಿ, ಪಿ.ಸಿ.ಬಿ ಇದು ಇಲೆಕ್ಟ್ರಾನಿಕ್ಸ್ ಸ್ಕಿಮ್ಯಾಟಿಕ್‌ನಿಂದ ಭೌತಿಕ ಮುದ್ರಿತ ಸರ್ಕ್ಯೂಟ್ ಬೋರ್ಡ್ ಪ್ರಕ್ರಿಯೆಯಾಗಿದ್ದು, ಅದು ಇಲೆಕ್ಟ್ರಾನಿಕ್ಸ್ ಉಪಕರಣದ ಸಮರ್ಪಕ ಕಾರ್ಯ ನಿರ್ವಹಣೆ ಮಾಡುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಇದರ ಜ್ಞಾನ ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಇಲೆಕ್ಟಿçಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಈರಣ್ಣ ಕೊರಚಗಾಂವ್ ಹಾಗೂ ವಿದ್ಯುನ್ಮಾನ ಮತ್ತು ಸಂವಹನ (ಇ&ಸಿ) ಮುಖ್ಯಸ್ಥರಾದ ಪ್ರೊ. ಜಗದೀಶ ಶಿವನಗುತ್ತಿ ಉದ್ಘಾಟಿಸಿರು.

ಡಾ. ಈರಣ್ಣ ಕೊರಚಗಾಂವ್ ಮಾತನಾಡಿ, ಪಿ.ಸಿ.ಬಿ ಇದು ಇಲೆಕ್ಟ್ರಾನಿಕ್ಸ್ ಮಹತ್ವಾಕಾಂಕ್ಷಿ ಭಾಗವಾಗಿದ್ದು, ಹಾರ್ಡ್ವೇರ್ ಅಳವಡಿಸಲು ಬೇಕಾದ ಮಹತ್ವಪೂರ್ಣ ವ್ಯವಸ್ಥೆಯಾಗಿದೆ. ಅದರೊಂದಿಗೆ ಸಾಫ್ಟ್ವೇರ್‌ನ್ನು ಸಂಯೋಜಿಸುವ ತಾಂತ್ರಿಕತೆಯನ್ನು ಇಂದಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಪಿ.ಸಿ.ಬಿ ಪ್ರಾಯೋಗಿಕತೆಯನ್ನು ಸವಿವರವಾಗಿ ತಿಳಿಸಿದ ಪ್ರೊ. ಜಗದೀಶ ಶಿವನಗುತ್ತಿ, ಇಂದಿನ ಆಧುನಿಕ ಯುಗದಲ್ಲಿ ಬಹುತೇಕ ಎಲ್ಲ ಇಲೆಕ್ಟ್ರಾನಿಕ್ಸ್ ಪರಿಕರಗಳು ಪಿ.ಸಿ.ಬಿಯನ್ನು ಅವಲಂಬಿಸಿವೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಸಂವಹನ (ಇ&ಸಿ) ವಿಭಾಗದ ಸಿಬ್ಬಂದಿಗಳಾದ ಡಾ. ಶೈಲಜಾ ಮುದೇನಗುಡಿ, ಡಾ. ಪ್ರಕಾಶ ಮರಕುಂಬಿ, ಪ್ರೊ. ಆದೇಶ ಅಂಗಡಿ, ಪ್ರೊ. ರವಿ ಗಡಾದ, ಪ್ರೊ. ಮುಕ್ತಾ ಪಾಟೀಲ, ಪ್ರೊ. ಲೋಹಿತ ಜವಳಿ ಉಪಸ್ಥತರಿದ್ದರು. ಕಾರ್ಯಕ್ರಮವನ್ನು ಪ್ರೊ. ನೀತಾ ಮುದರಡ್ಡಿ ಸಂಯೋಜಿಸಿದ್ದರು. ವಿದ್ಯಾರ್ಥಿಗಳಾದ ಆದಿತಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಜನಾ ವಂದಿಸಿದರು.


Spread the love

LEAVE A REPLY

Please enter your comment!
Please enter your name here