ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್‌ನ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಒಂದು ದಿನದ ನವಜಾತ ಶಿಶು ಮತ್ತು ಬಾಲ್ಯದ ಕಾಯಿಲೆಗಳ ಸಮಗ್ರ ನಿರ್ವಹಣೆಯ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಎಚ್‌ಆರ್‌ಸಿ ನಿರ್ದೇಶಕರಾದ ಡಾ. ಶ್ವೇತಾ ಸಂಕನೂರ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿಲ್ಪಾ, ಡಾ. ವೆಂಕಟೇಶ ಆಗಮಿಸಿ ಐಎಮ್‌ಎನ್‌ಸಿಐ ಕುರಿತು ಉಪನ್ಯಾಸ ನೀಡಿ, ರೋಗ ಲಕ್ಷಣಗಳನ್ನು ಕಂಡುಹಿಡಿಯುವ ಬಗೆ, ಮಕ್ಕಳ ಆರೋಗ್ಯ ಪರೀಕ್ಷೆ ಮಾಡುವ ಬಗೆ, ನೀಡಬೇಕಾದ ಚಿಕಿತ್ಸೆಯ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಪಾಟೀಲ ಮಾತನಾಡಿದರು. ಸಹ ಸಂಘಟನಾ ಕಾರ್ಯದರ್ಶಿ ರಶ್ಮೀ ಪಾಟೀಲ ಉಪನ್ಯಾಸ ನೀಡಿದರು. ಕವಿತಾ ಪವಾರ ಮಕ್ಕಳ ಅನಾರೋಗ್ಯದ ಸಮಯದಲ್ಲಿ ಪೋಷಕರಿಗೆ ನೀಡಬೇಕಾದ ಸಲಹೆಗಳ ಕುರಿತ ಉಪನ್ಯಾಸ ನೀಡಿದರು. ಪ್ರಿಯಂಕಾ ಬಾರಾಟ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಕನೂರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here