ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಅಂಜುಮನ್ ಇಸ್ಲಾಂ ಕಮಿಟಿಯ ನೇತೃತ್ವದಲ್ಲಿ ಉಮ್ರಾ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ನಗರದ ಶಾದಿಮಹಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ಉಮ್ರಾ ಯತ್ರೆಗೆ ತೆರಳಲು ಸಿದ್ದರಾಗಿರುವ ಕುಷ್ಟಗಿ, ಯಲಬುರ್ಗಾ, ಗದಗ ಸೇರಿದಂತೆ ಗಜೇಂದ್ರಗಡ ಭಾಗದ 60ಕ್ಕೂ ಹೆಚ್ಚು ಯಾತ್ರಿಗಳಿಗೆ ಸಂಸ್ಥೆಯಿAದ ಸನ್ಮಾನಿಸಲಾಯಿತು. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಬಿ. ದಂಡಿನರನ್ನು ಇದೇ ವೇಳೆ ಸತ್ಕರಿಸಲಾಯಿತು.
ಅಲಹಾಜ್ ಖಲೀಲ ಅಹ್ಮದ ಖಾಜಿ, ಯಾಸೀನ್ ಮೌಲಾನ, ಹಾಫೀಜ್ ಇಮ್ರಾನ್ ಹುಬ್ಬಳ್ಳಿ, ಮೌಲಾನ ಜುನ್ನುನ ಚಿಸ್ತಿ ಹುಬ್ಬಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದು, 15 ದಿನದ ಉಮ್ರಾ ಯಾತ್ರೆಯಲ್ಲಿ ಯಾತ್ರಿಗಳು ಪ್ರಾರ್ಥನೆ ಸಲ್ಲಿಸಲು ಅನುಸರಿಸಬೇಕಾದ ನಿಯಮ, ಕ್ರಮಗಳ ಕುರಿತು ಸಲಹೆ ನೀಡಿದರು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಹಸನಸಾಬ ತಟಗಾರ, ಕಾರ್ಯದರ್ಶಿ ಫಯಾಜ್ ತೋಟದ, ಸಂಸ್ಥೆಯ ನಿರ್ದೇಶಕರಾದ ದಾವಲಸಾಬ ತಾಳಿಕೋಟಿ, ಎ.ಡಿ. ಕೋಲಕಾರ, ನಾಸೀರ ಸುರಪುರ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಸುಭಾನಸಾಬ ಆರಗಿದ್ದಿ, ಎ.ಕೆ. ಕಾತರಕಿ, ಜಿಲ್ಲಾ ವಕ್ಫ್ ಮಂಡಳಿ ಸದಸ್ಯ ಅಶ್ರಫ್ ಅಲಿ ಗೋಡೇಕಾರ, ಶೌಕತ ಅರಳಿಕಟ್ಟಿ, ಶಾಮೀದ ಮಾಲ್ದಾರ, ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.



