ಇಂದಿನಿಂದ`ಕನ್ನಡ ಶಾಸನಗಳ ಅಧ್ಯಯನ’ ಕಾರ್ಯಾಗಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಾಸ್ತ್ರಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು, ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಕೇಂದ್ರ, ತೋಂಟದಾರ್ಯಮಠ ಗದಗ ಹಾಗೂ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ಶಾಸನಗಳ ಅಧ್ಯಯನ ಮತ್ತು ಸಂಶೋಧನೆ ಕುರಿತು 5 ದಿನಗಳ ತರಬೇತಿ ಕಾರ್ಯಾಗಾರವನ್ನು ಜ.27ರಿಂದ ಜ.31ರವರೆಗ ಗದುಗಿನ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

Advertisement

ಜ. 27ರಂದು ಜರುಗುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪರಮಶಿವಮೂರ್ತಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಶಾಸನ ತಜ್ಞರಾದ ಡಾ. ಹನುಮಾಕ್ಷಿ ಗೋಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ವಹಿಸುವರು. ಶಾಸ್ತ್ರಿಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ ಪ್ರಾಸ್ತಾವಿಕ ನುಡಿಗಳನ್ನಾಡುವರು. ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಂ. ಬುರಡಿ, ಎಂ.ಎಂ.ಕಲಬುರ್ಗಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಅರ್ಜುನ ಗೊಳಸಂಗಿ ಉಪಸ್ಥಿತರಿರುವರು.

5ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತಜ್ಞರಾದ ಪ್ರೊ. ದೇವರ ಕೊಂಡಾರೆಡ್ಡಿ, ಎಂ.ಜಿ. ಮಂಜುನಾಥ, ಡಾ. ನಾಗರಾಜಪ್ಪ, ರಂಗರಾಜು ಎನ್.ಎಸ್., ಡಾ. ಎಸ್. ರಾಜೇಂದ್ರಪ್ಪ, ಡಾ. ಷಡಕ್ಷರಯ್ಯ, ಜೆ.ಎಂ. ನಾಗಯ್ಯ, ಡಾ. ಎಸ್.ವೈ. ಸೋಮಶೇಖರ, ಡಾ. ಅನಿಲಕುಮಾರ, ಡಾ. ರಾಜಶೇಖರಪ್ಪ, ಡಾ. ಗವಿಸಿದ್ಧಯ್ಯ, ಡಾ. ಡಿ. ಸ್ಮಿತಾರೆಡ್ಡಿ ಭಾಗವಹಿಸುವರೆಂದು ಡಾ. ಎಲ್.ಆರ್. ಪ್ರೇಮಕುಮಾರ, ಡಾ. ಮರಿಸ್ವಾಮಿ ಆರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here