ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ಉಪ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಾದೇಶಿಕ ವಿಭಾಗ, ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮೃಗಾಲಯ ಗದಗ ಹಾಗೂ ಪ್ರಾ.ಆ. ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಬಿಂಕದಕಟ್ಟಿ ಮೃಗಾಲಯದಲ್ಲಿ ಮಂಗಳವಾರ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆಯನ್ನು ಆಚರಿಸಲಾಯಿತು.

Advertisement

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಪರಿಣಾಮ ಬೀರಲಿದೆ ಎಂದರಲ್ಲದೆ, ಪ್ರಾಣಿಗಳಿಂದ ಮನುಷ್ಯನಿಗೆ ರೇಬಿಸ್, ಹಕ್ಕಿಜ್ವರ, ಹಂದಿಜ್ವರ, ಬ್ರುಸ್ಸೆಲಾ, ಅಂತ್ರಾಕ್ಸ್ ಮುಂತಾದ ರೋಗಗಳು ಹರಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಪ್ರಾಣಿಜನ್ಯ ರೋಗಗಳಲ್ಲಿ ವಿಶೇಷವಾಗಿ ರೇಬಿಸ್ ಪ್ರಕರಣಗಳ ಅಪಾಯಕಾರಿ ಎಂದು ವಿವರಿಸಿ, ಜಿಲ್ಲೆಯಲ್ಲಿ ಎಲ್ಲ ಸರಕಾರಿ ಸಂಸ್ಥೆಗಳಲ್ಲಿ ರೇಬಿಸ್‌ಗೆ ಸಂಬಂಧಿಸಿದ ಲಸಿಕೆಗಳು ಉಚಿತವಾಗಿ ಸಿಗುವುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೃಗಾಲಯದ ಮಹಾಂತೇಶ ಪೊಲೀಸ್‌ಪಾಟೀಲ್, ಎ.ಸಿ.ಎಫ್, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಗೀತಾ ಕಾಂಬ್ಳೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಮೀಕ್ಷಣಾ ಘಟಕದ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here