HomeGadag Newsಬಾಲಕಾರ್ಮಿಕ ಪದ್ಧತಿ ಹೊಡೆದೋಡಿಸಿ : ಸಿ.ಎಸ್. ಶಿವನಗೌಡ್ರ

ಬಾಲಕಾರ್ಮಿಕ ಪದ್ಧತಿ ಹೊಡೆದೋಡಿಸಿ : ಸಿ.ಎಸ್. ಶಿವನಗೌಡ್ರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕ್ರಿಯಾಶೀಲತೆಯಿಂದ ಶ್ರಮವಹಿಸಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ಕರೆ ನೀಡಿದರು.

ನಗರದ ತೊಂಟದಾರ್ಯ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಇವುಗಳ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸಾರ್ವಜನಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ಸಹಕರಿಸಿ ಬಲವಂತವಾಗಿ ಕೆಲಸ ಮಾಡುತ್ತಿರುವ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಬೇಕು ಎಂದು ಅವರು ಹೇಳಿದರು.

World Anti-Child Labor Day

ಜಾಥಾದಲ್ಲಿ ಕೆಲಸ ಬಿಡಿಸಿ ಶಾಲೆಗೆ ಕಳಿಸಿ, ಬೆಳೆಯುವ ವಯಸ್ಸಿನಲ್ಲೇ ದುಡಿಮೆಗೆ ದೂಡಬೇಡಿ, ಮಕ್ಕಳನ್ನು ಶಾಲೆಗೆ ಕಳಿಸಿ-ಕೆಲಸಕ್ಕಲ್ಲ, ದುಡಿಮೆ ಬೇಡ ಶಿಕ್ಷಣ ಬೇಕು, ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ, ಬನ್ನಿ ಬಾಲಕಾರ್ಮಿಕ ಪದ್ಧತಿಯನ್ನು ತಡೆಯೋಣ ಸತ್ಪçಜೆಗಳನ್ನಾಗಿಸಲು ಹುರಿದುಂಬಿಸೋಣ, ಮಕ್ಕಳಿಗೆ ಬೇಕು ಆಟ ಪಾಠ-ಬೇಡ ಕೆಲಸಗಳ ಕಾಟ, ಬಾಲಕಾರ್ಮಿಕ ಪದ್ಧತಿ ನಿವಾರಣೆ ದೇಶದ ಸುಧಾರಣೆ, ದುಡಿಮೆಯಿಂದ ಶಾಲೆಗೆ ಕತ್ತಲೆಯಿಂದ ಬೆಳಕಿಗೆ, ಹಚ್ಚಬೇಡ ಹಚ್ಚಬೇಡ ಕೂಲಿಗೆ ನನ್ನನ್ನು-ಹಚ್ಚು ಬಾ ಹಚ್ಚು ಬಾ ಶಾಲೆಗೆ ನನ್ನನ್ನು, ದುಡಿಮೆ ಬೇಡ ಶಿಕ್ಷಣ ಬೇಕು ಎಂಬಿತ್ಯಾದಿ ಘೋಷವಾಕ್ಯಗಳೊಂದಿಗೆ ತೊಂಟದಾರ್ಯ ಪ್ರೌಢಶಾಲೆಯಿಂದ ಪ್ರಾರಂಭವಾದ ಜಾಥಾ ರೋಟರಿ ವೃತ್ತ, ಗಾಂಧಿ ವೃತ್ತ, ಟಾಂಗಾ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

ಜಾಥಾದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಅಕ್ರಂ ಎಚ್.ಅಲ್ಲಾಪೂರ, ತೊಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅನ್ನಪೂರ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಮ್.ಎ. ರಡ್ಡೇರ, ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಕಾರ್ಮಿಕ ನಿರೀಕ್ಷಕ ಗಿರೀಶ ಬಂಕದಮನಿ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯ ಯೋಜಾನಾ ನಿರ್ದೇಶಕ ಸಂದೇಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಮಾತನಾಡಿ, ಸಮಾಜದ ಅನಿಷ್ಟ ಪದ್ಧತಿಯಾದ ಬಾಲಕಾರ್ಮಿಕತೆಯನ್ನು ಕೊನೆಗೊಳಿಸಿ ದೇಶದ ಆಸ್ತಿಯಾದ ಮಕ್ಕಳ ಜೀವನವನ್ನು ಉಜ್ವಲಗೊಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!