HomeGadag News`ವಿಶ್ವ ಕಲಾ ದಿನಾಚರಣೆ' ಕಾರ್ಯಕ್ರಮ ಇಂದು

`ವಿಶ್ವ ಕಲಾ ದಿನಾಚರಣೆ’ ಕಾರ್ಯಕ್ರಮ ಇಂದು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ದೃಶ್ಯ ಕಲಾವಿದರು ಸಂಘ ಗದಗ ವತಿಯಿಂದ ಶನಿವಾರ ಸಂಜೆ 6 ಗಂಟೆಗೆ ಕಸಾಪ ಕಾರ್ಯಾಲಯದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ವಿಶ್ವ ಕಲಾ ದಿನದ ಅಂಗವಾಗಿ ಕಾವ್ಯ-ಕುಂಚ-ಗಾಯನ, ಕಲಾ ಪ್ರದರ್ಶನ, ಸಂಮಾನ ಕಾರ್ಯಕ್ರಮ ಜರುಗಲಿದೆ.

ಉದ್ಘಾಟನೆಯನ್ನು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಕಲೇಗಾರ ಸದಸ್ಯ ಡಾ. ಬಸವರಾಜ ಎಸ್. ಭಾಗವಹಿಸುವರು. ಕಲಾ ಸಾಧಕರನ್ನು ಸಾಹಿತಿ ಪ್ರೊ. ಅನ್ನದಾನಿ ಹಿರೇಮಠ ಸನ್ಮಾನಿಸುವರು. ದೃಶ್ಯ ಕಲಾವಿದರ ಸಂಘದ ಅಧ್ಯಕ್ಷ ಡಾ. ಬಿ.ಎಲ್. ಚವ್ಹಾಣ ಉಪಸ್ಥಿತರಿರುವರು. ಆತಿಥ್ಯವನ್ನು ಚಿತ್ರಕಲಾ ಶಿಕ್ಷಕರಾದ ರಮೇಶ ಮುರಗೋಡ, ನಜೀರಹ್ಮದ ಡಂಬಳ ಕಡಕೋಳ ವಹಿಸುವರು.

ಕಾವ್ಯ-ಕುಂಚ-ಗಾಯನದಲ್ಲಿ ನಜೀರಹ್ಮದ ಡಂಬಳ, ಎ.ಎಸ್. ಮಕಾನದಾರ, ಶಿವರಾಜ ಕಮ್ಮಾರ, ಮರುಳಸಿದ್ಧಪ್ಪ ದೊಡ್ಡಮನಿ, ಪ್ರೊ. ಬಿ.ಸಿ. ಕುತ್ನಿ, ಶಾರದಾ ಬಾಣದ, ಪ್ರೊ. ಬಸವರಾಜ ನೆಲಜೇರಿ, ಅಕ್ಕಮಹಾದೇವಿ ಕಮತ, ಬಿ.ಕೆ. ಬಡಿಗೇರ, ಡಾ. ವಿನಾಯಕ ಕಮತದ, ಸವಿತಾ ಗುಡ್ಡದ, ಸಂಜಯ ತೆಂಬದಮನಿ, ಎಸ್.ಎಸ್. ಚಿಕ್ಕಮಠ ಭಾಗವಹಿಸುವರು.

ವಿಜಯ ಕಲಾ ಮಂದಿರ ಚಿತ್ರಕಲಾ ಮಹಾವಿದ್ಯಾಲಯ, ವಿ.ಡಿ.ಎಸ್. ಜೆ.ಎನ್. ಚಿತ್ರಕಲಾ ಮಹಾವಿದ್ಯಾಲಯ, ವಿಜಯ ಲಲಿತಕಲಾ ಕಾಲೇಜು ಇವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಪರಿಷತ್ತಿನ ಆಜೀವ ಸದಸ್ಯರು ಪಾಲ್ಗೊಳ್ಳಬೇಕೆಂದು ಕಾರ್ಯದರ್ಶಿಗಳಾದ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಕೋಶಾಧ್ಯಕ್ಷ ಈರಣ್ಣ ಮಾದರ, ಸಹ ಕಾರ್ಯದರ್ಶಿಗಳಾದ ಡಾ. ದತ್ತಪ್ರಸನ್ನ ಪಾಟೀಲ, ಶ್ರೀಕಾಂತ ಬಡ್ಡೂರ, ದೃಶ್ಯಕಲಾವಿದರ ಸಂಘದ ಕಾರ್ಯದರ್ಶಿ ಷಹಜಹಾನ ಮುದಕವಿ, ಸಂಚಾಲಕ ಪ್ರೊ. ಬಿ.ಜಿ. ನೆಲಜೇರಿ, ಪ್ರೊ. ಪಿ.ಬಿ. ಬಂಡಿ, ಪ್ರೊ. ಬಿ.ಸಿ ಕುತ್ನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೃಶ್ಯ ಕಲೆಯಲ್ಲಿ ಸಾಧನೆ ಮಾಡಿದ ಡಾ. ಬಿ.ಎಲ್. ಚವ್ಹಾಣ, ಡಾ. ಬಸವರಾಜ ಕಲೇಗಾರ, ಕೃಷ್ಣಾ ಕೆ.ಎಂ., ಷಹಜಹಾನ ಮುದಕವಿ, ಡಾ. ಸಿ.ವಿ. ಬಡಿಗೇರ, ಎನ್.ಬಿ. ಪರ್ವತಗೌಡ್ರ, ಕೆ.ಬಿ. ಬಡಿಗೇರ ಇವರನ್ನು ಸನ್ಮಾನಿಸಲಾಗುವುದು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!