ಗದಗ: ಗದುಗಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯ ಭರಮಪ್ಪ ಬಡಪ್ಳವರ, ಇ&ಸಿ ವಿಭಾಗಾಧಿಕಾರಿ ಜೈನಾಬಿ, ಯಾಂತ್ರಿಕ ವಿಭಾಗಾಧಿಕಾರಿ ಡಾ. ಶಿವಾನಂದ ಪೂಜಾರ, ಕಂಪ್ಯೂಟರ್ ಸೈನ್ಸ್ ವಿಭಾಗಾಧಿಕಾರಿ ಮಂಗಳಗೌರಮ್ಮ ಶಿವಸಿಂಪಿಗೇರ, ಸಿವಿಲ್ ವಿಭಾಗಾಧಿಕಾರಿ ಕೊಟ್ರಗೌಡ, ಕಛೇರಿ ಅಧೀಕ್ಷಕರುಗಳಾದ ವೀರೇಶ ಕಂಠಿಮಠ, ರಮೇಶ ಮಾವಿನಕಾಯಿ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Trending Now



