HomeGadag Newsಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಿ : ರಾಮೇಶ್ವರ ಶಿರಹಟ್ಟಿ

ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಿ : ರಾಮೇಶ್ವರ ಶಿರಹಟ್ಟಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಾಲೆಯ ವಿದ್ಯಾರ್ಥಿಗಳು ಪ್ರಭಾತಪೇರಿ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ರಾಮೇಶ್ವರ ಶಿರಹಟ್ಟಿ ವಹಿಸಿ ಮಾತನಾಡಿ, ಈ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಬೇಕಾದರೆ ಉತ್ತಮವಾದ ಪರಿಸರ ಇರಬೇಕು.

ಭೂಮಿಯನ್ನು ಹಸಿರಾಗಿಸಲು ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಗಂಗಾಧರ ಶಿರಹಟ್ಟಿ ಮಾತನಾಡಿ, ನಮ್ಮೆಲ್ಲರ ಜೀವನವು ಉತ್ತಮವಾಗಿರಬೇಕಾದರೆ ನಾವು ಉತ್ತಮವಾದ ಪರಿಸರವನ್ನು ನಿರ್ಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಖತ್ ಭದ್ರಾಪುರ, ಪೂರ್ಣಿಮಾ ಕೊಡ್ಲಿ, ಮಾರುತಿ ಮ್ಯಾಗೇರಿ, ಸಂಜೀವ ಮೇಹರವಾಡೆ, ಸುವರ್ಣ ಹಡಗಲಿ, ಮೇರಿ ಅಂಥೋನಿ, ಸೀಮಾ ಪಾಟೀಲ, ಪ್ರೀತಿ ಅಖಳಂಡಸ್ವಾಮಿಮಠ, ದಾನಮ್ಮ ಜವಳಿ, ವಿಜಯಲಕ್ಷ್ಮಿ ಪಾಟೀಲ, ವಿಜಯಲಕ್ಷ್ಮಿ ಹಣಗಿ, ಭಾರತಿ ದೇಸಾಯಿ, ಕಾವೇರಿ ಗದಗ, ಅನುಷಾ ಹಿರೇಮಠ, ರೇಷ್ಮಾ ಪಟೇಲ್, ಅಕ್ಷತಾ ಕೋರಿಶೆಟ್ಟರ್, ಲತಾ ಬಸಾಪುರ, ಆಶಾಬೇಗಂ ನದಾಫ್, ಗೀತಾ ಮುಗಳಿ, ದೀಪಾ ದೊಡ್ಡಮನಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!