ಪರಿಸರ ರಕ್ಷಣೆಯ ಜವಾಬ್ದಾರಿ ಎಲ್ಲರದಾಗಲಿ : ಪದ್ಮಶ್ರೀ ಆರ್.ಪಾಟೀಲ

0
World Environment Day Program
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿಶ್ವ ಪರಿಸರ ದಿನದಂದು ನೆಟ್ಟ ಸಸಿಗಳನ್ನು ವರ್ಷದುದ್ದಕ್ಕೂ ಸಂರಕ್ಷಿಸುವ ಗುರುತರ ಜವಾಬ್ದಾರಿ ಎಲ್ಲರದ್ದಾಗಿದ್ದು, ಈ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಪದ್ಮಶ್ರೀ ಆರ್.ಪಾಟೀಲ ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆ ನಂ.1, ಕೋರ್ಟ್ ಆವರಣದಲ್ಲಿ ತಾಲೂಕಾ ಕಾನೂನು ಸೇವೆಗಳ ನೆರವು ಸಮಿತಿ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ, ಅರಣ್ಯ ಇಲಾಖೆ, ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸುತ್ತಲಿನ ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುವ ಜತೆಗೆ ಪರಿಸರ ಬೆಳೆಸಿ ಸಂರಕ್ಷಿಸುವ ಸ್ವಯಂಪ್ರೇರಿತ ಕಾರ್ಯವಾಗಬೇಕು. ಪರಿಸರ ರಕ್ಷಣೆ ಎಂಬುದು ಕೇವಲ ಒಂದು ದಿನದ ಘೋಷಣೆ-ಆಚರಣೆಯಾಗಬಾರದು.

ಆಮ್ಲಜನಕವನ್ನು ನೀಡುವ ಗಿಡಗಳಿಂದ ನಾವೆಲ್ಲರೂ ಉಸಿರಾಡುತ್ತಿದ್ದೇವೆ. ನಿರಂತರವಾಗಿ ಪರಿಸರದ ಮೇಲೆ ಅನ್ಯಾಯ ನಡೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಗಾಳಿಯನ್ನು ಸಹ ನಾವು ಹಣಕ್ಕೆ ಕೊಳ್ಳಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗುವ ದಿನಗಳು ದೂರವಿಲ್ಲ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೆಶ್ವರಮಠ ಮಾತನಾಡಿ, ಪ್ರತಿವರ್ಷ ಅರಣ್ಯ ಇಲಾಖೆ ಅನೇಕ ಸಂಘ-ಸಂಸ್ಥೆಗಳ ಸಹಾಯದಿಂದ ಸಾಕಷ್ಟು ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುತ್ತಿದೆ. ಆದರೆ ಅವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ. ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಆರೋಗ್ಯದಿಂದ ಇರಲು ಸಾಧ್ಯ ಎನ್ನುವದನ್ನು ಎಲ್ಲರೂ ಅರಿತುಕೊಂಡು ಗಿಡ-ಮರಗಳನ್ನು ರಕ್ಷಿಸುವ ಕಾರ್ಯ ಮಾಡುವಂತೆ ವiನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎ.ಟಿ. ಕಟ್ಟಿಮನಿ, ವ್ಹಿ.ಎಸ್. ಪಶುಪತಿಹಾಳ, ವ್ಹಿ.ಎಸ್. ಪಶುಪತಿಹಾಳ, ಬಿ.ಎಸ್. ಪಾಟೀಲ, ಎಸ್.ಪಿ. ಬಳಿಗಾರ, ಎ.ಬಿ. ಪಾಟೀಲ, ಎನ್.ಎಸ್. ಸೊರಟೂರ, ಎಸ್.ಸಿ. ನರಸಮ್ಮನವರ, ಎನ್.ವೈ. ಗೊಬ್ಬರಗುಂಪಿ, ಸಿ.ಎಲ್. ಜಾಧವ್, ಎನ್.ಸಿ. ಅಮಾಸಿ, ಆರ್.ಎಂ. ಕುರಿ, ಅರಣ್ಯ ಇಲಾಖೆಯ ಎಸ್.ಎಲ್. ವಿಭೂತಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here