ವಿಜಯಸಾಕ್ಷಿ ಸುದ್ದಿ, ನರೇಗಲ್ : ನಾವು ವಾಸಿಸುವ ಮನೆ ಹಾಗೂ ಕಲಿಯುವ ಶಾಲೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಮುಖ್ಯಶಿಕ್ಷಕ ಎಂ.ಬಿ. ಸಜ್ಜನರ ಹೇಳಿದರು.
ಪಟ್ಟಣದ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸ, ತ್ಯಾಜ್ಯ ನೀರು ಇವುಗಳಿಂದ ವಾತಾವರಣವು ಮಲಿನವಾಗುತ್ತದೆ. ಅದಕ್ಕಾಗಿ ಸರ್ಕಾರ ಹಸಿ ಕಸ, ಒಣ ಕಸ ವಿಂಗಡಿಸಿ ನಿಮ್ಮ ಮನೆಯ ಮುಂದೆ ಬರುವ ವಾಹದಲ್ಲಿ ಹಾಕಲು ಅನುಕೂಲ ಮಾಡಿದೆ. ನಿಮ್ಮ ಮನೆಯ ಪರಿಸರ ಸ್ವಚ್ಛವಾಗಿದ್ದರೆ ಊರೆಲ್ಲ ಸ್ವಚ್ಛವಾಗಿರುತ್ತದೆ. ಗಿಡಗಳನ್ನು ಬೆಳೆಸಲು ಪ್ರಯತ್ನ ಪಡಬೇಕು.
ಗಿಡಗಳನ್ನು ಬೆಳೆಸಿ ಉಳಿಸಿಕೊಳ್ಳದಿದ್ದರೆ ಮುಂದೊಂದು ದಿನ ಆಮ್ಲಜನಕ ಇಲ್ಲದಂತಾಗಿ ಪ್ರಾಣಾಪಾಯಕ್ಕೆ ಗುರಿಯಾಗುತ್ತೇವೆ. ಅದಕ್ಕಾಗಿ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎ.ಎಂ. ರಾಠೋಡ್, ಎಂ.ವಿ. ವಿರಾಪೂರ, ಎಂ.ವಿ. ಬಿಂಗಿ, ಎಲ್.ಎನ್. ನಾಯಕ್, ಎಸ್.ಕೆ. ಗಾಣಿಗೇರ, ಆರ್.ಎಂ. ಸಿಳ್ಳಿನ್, ಟಿ.ಬಿ. ಆಡೂರ, ಎಸ್.ಬಿ. ಬೂದಿಹಾಳ, ಐ.ಎಂ. ಆರಿ, ಎನ್.ವಿ. ಕೊಡಿಕೊಪ್ಪಮಠ, ಎಸ್.ಕೆ. ನಿಡಶೇಶಿ, ಬಿ.ವೈ. ಅಬ್ಬಿಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ: ಪಟ್ಟಣದ ಪಂಚಾಚಾರ್ಯ ಗ್ರಾಮಿಣಾಭಿವೃದ್ದಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಆರ್.ಕೆ. ಗಚ್ಚಿನಮಠ, ಈಶ್ವರ ಬೆಟಗೇರಿ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ವಿಜಯಲಕ್ಷ್ಮಿ ಬಿಂಗಿ, ಈಶ್ವರ ಆದಿ, ಜ್ಯೋತಿ ಗಂಗರಗೊಂಡ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.


