ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಚಿಂತನಾ ದಿನಾಚರಣೆ

0
tontadarya clg
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ‘ವಿಶ್ವ ಚಿಂತನಾ ದಿನ’ ಆಚರಿಸಿದರು.

Advertisement

ಪ್ರಾಚಾರ್ಯ ಡಾ. ಎಂ.ಎಂ. ಅವಟಿ ಪ್ರತಿ ವರ್ಷ ಫೆ.೨೨ರಂದು ಆಚರಿಸಲಾಗುವ ವಿಶ್ವ ಚಿಂತನಾ ದಿನದ ಮಹತ್ವವನ್ನು ತಿಳಿಸುತ್ತಾ, ಇಂದು ಜಗತ್ತು ಎದುರಿಸುತ್ತಿರುವ ಸವಾಲುಗಳಾದ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ, ವಿದ್ಯಾರ್ಥಿ ಸಮೂಹದಲ್ಲಿ ಏಕತೆ, ತಿಳುವಳಿಕೆ ಮತ್ತು ಸಹಾನುಭೂತಿಯ ಮನೋಭಾವವನ್ನು ಬೆಳೆಸುವ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರೊ. ಜಗದೀಶ ಶಿವನಗುತ್ತಿ, ಪ್ರೊ. ಸಂತೋಷಕುಮಾರ ಜಿ.ಎಮ್ ವಿದ್ಯಾರ್ಥಿಗಳಿಂದ ‘ವಿಶ್ವ ಥಿಂಕಿಂಗ್ ಡೇ’ ಆಚರಣೆಯ ಅಂಗವಾಗಿ ಜಾಥಾ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ಅಶ್ವಿನಿ ಅರಳಿ, ಪ್ರೊ. ಮಧುಸೂಧನ ಕುಲಕರ್ಣಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ಆರ್.ವಿ. ಕಡಿ, ಪ್ರೊ. ಎಸ್.ಎಸ್. ಕಂದಗಲ್ಲ, ಪ್ರೊ. ಮಲ್ಲಿಕಾರ್ಜುನ ಜಿ.ಡಿ., ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನೀಲ ಪಾಟೀಲ, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಮೃತ್ಯುಂಜಯ ಹೂಗಾರ, ಪ್ರೊ. ಶಶಿಧರಗೌಡ ಸೇರಿದಂತೆ ಶಿಕ್ಷಕರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here