ಯೋಗ ಮಾಡಿ ಆರೋಗ್ಯವಾಗಿರೋಣ

0
World Yoga Day Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತ ದೇಶದ ಸಂಪತ್ತು ಯೋಗ. ಋಷಿ ಮುನಿಗಳು ಹಿಂದಿನಕಾಲದಿಂದಲೂ ಯೋಗಾಚರಣೆ ಮಾಡಿ ಪ್ರಕೃತಿಯೊಂದಿಗೆ ಹೇಗೆ ಹೊಂದಿಕೊಳ್ಳಬಹುದು ಎಂಬ ಹಲವು ಉದಾಹರಣೆಗಳು ಇಂದಿಗೂ ಕಾಣಸಿಗುತ್ತವೆ. ಇಂದು ವಿಶ್ವದ 180 ರಾಷ್ಟ್ರಗಳು ಯೋಗದ ಲಾಭ ತಿಳಿದು ತಮ್ಮ ದೈನಂದಿಕ ಜೀವದಲ್ಲಿ ಆಳವಡಿಸಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡರ ಹೇಳಿದರು.

Advertisement

ಅವರು ವಿಜಯ ಫೈನ್ ಆರ್ಟ್ಸ್ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದು ನಗರದ ವಿವಿಧ ಸ್ಥಳಗಳಲ್ಲಿ ಹಾಗೂ ಜಿಲ್ಲೇಯ ಎಲ್ಲಾ ತಾಲೂಕಾ ಮಟ್ಟದಲ್ಲಿಯೂ ಬಿಜೆಪಿ ಯುವ ಮೋರ್ಚಾದಿಂದ ಯೋಗ ದಿನಾಚರಣೆ ಆಚರಿಸಲಾಗಿದ್ದು ವಿಶೇಷವಾಗಿದೆ. ಯೋಗ ಮತ್ತು ಆಯುರ್ವೇದ ಒಂದು ನಾಣ್ಯದ ಎರಡು ಮುಖವಿದ್ದಂತೆ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಸಾಧನೆಯಿಂದ, ಹಠಯೋಗದಿಂದ ಏನೆಲ್ಲಾ ಸಾಧಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಪ್ರತಿ ನಿತ್ಯ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯದಿಂದ ಇರೋಣ ಎಂದು ಕರೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಯೋಗಕ್ಕೆ ಅತಿ ಪ್ರಾಚೀನ ಇತಿಹಾಸ ಇದೆ. ಯೋಗವನ್ನು ನಿತ್ಯ ಅಭ್ಯಾಸ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳು ಚಟುವಟಿಗಳಿಂದ ಆರೋಗ್ಯವಂತರಾಗಿರಲು ಸಾಧ್ಯ. ಇಂದಿನ ದಿನಾಮಾನಗಳಲ್ಲಿ ಔಷಧೀಗಳಿಂದ ದೂರ ಉಳಿಯಲು ಯೋಗ ಅಭ್ಯಾಸದಿಂದಲೇ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಪತಂಜಲಿ ಯೋಗ ಶಿಕ್ಷಕರಾದ ಶಂಕರ ಖಾಖಿ, ರಾಹುಲ ಸಂಕಣ್ಣವರ, ಸಾಗರ, ರಾಹುಲ ಅರಳಿ, ಅರುಣ ಹುಲ್ಲುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಯೋಗ ನಮ್ಮನ್ನು ಎತಂಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಾನಸಿಕ, ದೈಹಿಕವಾಗಿ ಸದೃಢವಾಗಿಡುವುದಲ್ಲದೇ ರೋಗಗಳಿಂದ ನಮ್ಮನ್ನು ಕಾಪಾಡಬಲ್ಲದು. ಯೋಗ ಮಾಡುವರು ಯಾವಾಗಲು ಯುವಕರಂತೆ ಸದೃಡರಾಗಿರುತ್ತಾರೆ. ಯೋಗ ನಮ್ಮನ್ನು ಆತಂರಿಕವಾಗಿ ಸದೃಢರನ್ನಾಗಿಸುವುದು ಎಂದರು.


Spread the love

LEAVE A REPLY

Please enter your comment!
Please enter your name here