ತುಮಕೂರು:- ಜಗತ್ತಿನ ಅತೀ ಸಣ್ಣ ವಿಷಕಾರಿ ಹಾವು ಕಲ್ಪತರು ನಾಡಿನಲ್ಲಿ ಪತ್ತೆಯಾಗಿದೆ.
ಹೌದು, ಕಲ್ಪತರು ನಾಡು ತುಮಕೂರಿನಲ್ಲಿ ಅತ್ಯಂತ ಸಣ್ಣ ಗಾತ್ರದ ವಿಷಕಾರಿ ಹಾವು ಪತ್ತೆಯಾಗಿದ್ದು, ಭಾರತದ 60 ಪ್ರಭೇದಗಳಲ್ಲಿ ವಿಷಯುಕ್ತ ಹವಳದ ಹಾವು ಇದಾಗಿದೆ.
ತುಮಕೂರು ಜಿಲ್ಲೆ ಶಿರಾದ ಬುಕ್ಕಾಪಟ್ಟಣ ವನ್ಯ ಜೀವಿ ಧಾಮದಲ್ಲಿ ವಿಷಕಾರಿ ಹಾವು ಕಾಣಿಸಿಕೊಂಡಿದೆ. ವನ್ಯಜೀವಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಹಾಗೂ ತಂಡ ಹವಳದ ಹಾವನ್ನು ಪತ್ತೆ ಮಾಡಿದ್ದಾರೆ.
ಈ ಹಾವು ಸುಮಾರು 30 ರಿಂದ 40 ಸೆ.ಮೀ. ವರೆಗೆ ಬೆಳೆಯುವ ಸಾಮರ್ಥ್ಯ ಇದ್ದು, ದೇಹ ತಲೆಯಿಂದ ಬಾಲದ ವರೆಗೆ ತೆಳಗ್ಗೆ ಸಿಲಿಂಡರ್ ಆಕಾರದಲ್ಲಿ ಏಕರೂಪವಾಗಿತ್ತದೆ.
ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣ ಹಾಗೂ ಸಣ್ಣ ಕಣ್ಣುಗಳನ್ನು ಒಳಗೊಂಡಿರುತ್ತದೆ.
ಬಾಲದ ತುದಿ ಮೊಂಡಾಗಿದ್ದು ಎರಡು ಕಪ್ಪು ಬಣ್ಣದ ಗೆರೆಗಳನ್ನು ಹೊಂದಿದೆ. ದಖ್ಖನ್ ಪ್ರಸ್ಥಭೂಮಿಯ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಾಣಿಸುವ ಅಪರೂಪದ ಹಾವು ಇದಾಗಿದೆ.
ಭಾರತದಲ್ಲಿ ಕಂಡು ಬರುವ ಸುಮಾರು 60 ಪ್ರಬೇಧದಗಳ ವಿಷಯುಕ್ತ ಹಾವುಗಳಲ್ಲಿ ಅತ್ಯಂತ ಸಣ್ಣ ವಿಷಕಾರಿ ಹವಳದ ಹಾವು ಮೊದಲ ಬಾರಿಗೆ ತುಮಕೂರಿನಲ್ಲಿ ಕಂಡು ಬಂದಿದೆ.