ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಬೆಟಗೇರಿ ಹೊಸಪೇಟ ಚೌಕದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ 2025ರ ಸಾಲಿನ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮಕ್ಕಾಗಿ ಶ್ರೀ ಕಾಳಿಕಾ ದೇವಿ ಉತ್ಸವ ಮೂರ್ತಿಯನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯ ನಿರ್ದೇಶಕರು ಹಾಗೂ ಪ್ರತಿಭಾನ್ವಿತ ಕಲಾವಿದ ಶ್ರೀಕಾಂತ ಎಮ್.ಬಡಿಗೇರ ಇವರಿಂದ ತಯಾರಿಸಲಾಗಿತ್ತು.
ಉತ್ಸವದ ತರುವಾಯ ಉತ್ಸವ ಮೂರ್ತಿಯನ್ನು ಕಾಷ್ಟ ಕೊಣೆಯ ಒಳಗೆ ಮುಂದಿನ ವರ್ಷದ ನವರಾತ್ರಿಯವರೆಗೆ ಭದ್ರವಾಗಿಡಲಾಗುತ್ತಿದ್ದು, ಪೂಜಾ ಕೈಂಕರ್ಯ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಕಾರ್ಯವನ್ನು ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ, ಸಮಾಜದ ಹಿರಿಯರಾದ ಪ್ರಕಾಶ ಬಡಿಗೇರ, ನಾರಾಯಣ ಕೊಣ್ಣೂರ, ಶಂಕರಪ್ಪ ಬಡಿಗೇರ, ಉಪಾಧ್ಯಕ್ಷ ಅಶೋಕ ಸುತಾರ, ಸಹಕಾರ್ಯದರ್ಶಿ ಗೋಪಾಲ ಬಡಿಗೇರ, ನಿರ್ದೇಶಕರಾದ ರಾಘವೇಂದ್ರ ಬಡಿಗೇರ, ಶ್ರೀಕಾಂತ ಬಡಿಗೇರ, ಅರ್ಚಕ ಸುರೇಶ ಬಡಿಗೇರ, ಉತ್ಸವ ಕಮಿಟಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪತ್ತಾರ, ವಿನಾಯಕ ರಾಮದುರ್ಗಾ, ಮಂಜುನಾಥ ಬಡಿಗೇರ, ಸತೀಶ ಹೊರಪೇಟ, ವಿಶ್ವಕರ್ಮ ಗಾಯಿತ್ರಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ಶೋಭಾ ಬೆಂತೂರ, ಸದಸ್ಯರಾದ ಶಾರದಾ ಬಡಿಗೇರ, ಸರೋಜ ಬೆಂತೂರ, ಲಕ್ಷ್ಮಿ ಕೊಣ್ಣೂರ, ಕಸ್ತೂರಿ ಬಡಿಗೇರ, ಜಾಹ್ನವಿ ಬಡಿಗೇರ, ನಿಖಿತಾ ಸುಜಾತ ಬಡಿಗೇರ ಸುತಾರ, ಮಂಜುಳಾ ಪತ್ತಾರ, ಪೂರ್ಣಿಮಾ ಪತ್ತಾರ, ಗೀತಾ ಬೆಂತೂರ, ವಿಶ್ವನಾಥ ಕಮ್ಮಾರ ಉಪಸ್ಥಿತರಿದ್ದರು.



