ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ. 10ರಿಂದ 3 ದಿನಗಳ ಕಾಲ ರಾಯರ 305ನೇ ಆರಾಧನಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು, ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ತಿಳಿಸಿದ್ದಾರೆ.
Advertisement
ನಿತ್ಯ ಮಠದಲ್ಲಿ ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ, ಅಭಿಷೇಕ, ವಿಶೇಷ ಅಲಂಕಾರ, ಪುರಾಣ-ಪ್ರವಚನ, ಪಾರಾಯಣ, ಸಂಗೀತ ಸೇವೆ ನಡೆಯಲಿದೆ. ಆ.12ರಂದು ಬೆಳಿಗ್ಗೆ 10ಕ್ಕೆ ಸಕಲ ವಾದ್ಯ ವೈಭವ, ಭಜನೆಗಳಿಂದ ರಥೋತ್ಸವ ನೆರವೇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.