ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಗೆ 6ವಿಕೆಟ್ ಗಳ ಜಯ ಸಿಕ್ಕಿದೆ. ವಡೋದರಾದಲ್ಲಿ ನಡೆದ ಡಬ್ಲ್ಯುಪಿಎಲ್ 2025 ರ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಗುಜರಾತ್ ತಂಡ 6 ವಿಕೆಟ್ ಗಳ ಅಂತರದಿಂದ ಮಣಿಸಿದೆ.
ಟಾಸ್ ಗೆದ್ದ ಗುಜರಾತ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಯುಪಿ ವಾರಿಯರ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ ಗುಜರಾತ್ ತಂಡ 143 ರನ್ ಗಳಿಗೆ ಕಟ್ಟಿ ಹಾಕಿತು.
ವಾರಿಯರ್ಸ್ ತಂಡದ ಪರ ದೀಪ್ತಿ ಶರ್ಮಾ 39 (27) ರನ್, ಉಮಾ ಚೆಟ್ರಿ 24 (27) ರನ್, ಅಲನಾ ಕಿಂಗ್ 19 (14) ರನ್ ಗಳಿಸಿದರು. ಸಾಧಾರಣ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡದ ಪರ, ನಾಯಕಿ ಆಶ್ಲೀ ಗಾರ್ಡ್ನರ್ 32 ಎಸೆತಗಳಲ್ಲಿ 52 ರನ್, ಹರ್ಲೀನ್ ಡಿಯೋಲ್ 30 ಎಸೆತಗಳಲ್ಲಿ 34 ರನ್, ಡಿಯಾಂಡ್ರಾ ಡಾಟಿನ್ 18 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗುಜರಾತ್ ತಂಡ 18 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 144 ರನ್ ಗಳಿಸಿ ಉತ್ತರ ಪ್ರದೇಶ ತಂಡದ ವಿರುದ್ಧ ಗೆಲುವು ಸಾಧಿಸಿತು.