HomeSports NewsWPL 2025: ಪೆರ್ರಿ-ರಿಚಾ ಆರ್ಭಟ: ಶುಭಾರಂಭ ಪಡೆದ RCB, ಗೆಲ್ಲಲು ಕಾರಣ ಆಗಿದ್ದೇ ಇವರು!

WPL 2025: ಪೆರ್ರಿ-ರಿಚಾ ಆರ್ಭಟ: ಶುಭಾರಂಭ ಪಡೆದ RCB, ಗೆಲ್ಲಲು ಕಾರಣ ಆಗಿದ್ದೇ ಇವರು!

For Dai;y Updates Join Our whatsapp Group

Spread the love

ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ತಂಡವು ಡಬ್ಲ್ಯುಪಿಎಲ್ 2025 ರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಗಳಿಸಿದೆ.

203 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡದ ಪರ ರಿಚಾ ಘೋಷ್ (64) ಹಾಗೂ ಪೆರಿ (57) ಅಬ್ಬರದ ಬ್ಯಾಟಿಂಗ್ ಗೆ ಗುಜರಾತ್ ಬೌಲರ್ ಗಳು ತತ್ತರಿಸಿದರು. ಆರ್ ಸಿಬಿ 6 ವಿಕೆಟ್ ಗಳೊಂದಿಗೆ ಮೊದಲ ಗೆಲುವು ದಾಖಲಿಸಿದೆ.

ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಗುಜರಾತ್ ತಂಡದ ಪರ ಆಶ್ಲೆ ಗಾರ್ಡ್ನರ್ ಅವರ ಸ್ಫೋಟಕ ಬ್ಯಾಟಿಂಗ್ (79 ರನ್) ಗಳ ನೆರವಿನಿಂದಾಗಿ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. 20 ಓವರ್ ಗಳಲ್ಲಿ ಗುಜರಾತ್ ತಂಡ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.

ಗುಜರಾತ್ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಗೆಲುವು ಸಾಧಿಸಿತು.

ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ (9) ಡೇನಿಯಲ್ ವ್ಯಾಟ್ (4) ರನ್ ಗಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಎಲಿಸ್ ಪೆರಿ ಮತ್ತು ರಾಘವಿ 86 ರನ್ ಗಳ ಜೊತೆಯಾಟ ಆಡಿದ್ದು ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಬಳಿಕ ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ ಗಳಿಸಿದ್ದು ತಂಡದ ಗೆಲುವಿಗೆ ಸಹಕಾರಿಯಾಯಿತು.

ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ದಾಖಲೆ ಆರ್​ಸಿಬಿ ಪಾಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!