WPL 2025: ಪಂದ್ಯ ಗೆದ್ದರೂ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB!

0
Spread the love

ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೂರನೇ ಸೀಸನ್ ಆರಂಭವಾಗಿದೆ. ಶುಕ್ರವಾರ ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಹಿಳಾ ತಂಡವು ಗುಜರಾತ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

Advertisement

ಈ ಗೆಲುವಿನ ಹೊರತಾಗಿಯೂ ಆರ್​ಸಿಬಿ ಎರಡು ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದೆ. ಅದು ಕೂಡ 20 ಓವರ್​ಗಳಲ್ಲಿ ಬರೋಬ್ಬರಿ 201 ರನ್​ಗಳನ್ನು ಚಚ್ಚಿಸಿಕೊಳ್ಳುವ ಮೂಲಕ..!

ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಬೆತ್ ಮೂನಿ (56) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ನಾಯಕಿ ಆಶ್ಲೀ ಗಾರ್ಡ್ನರ್ ಆರ್​ಸಿಬಿ ಬೌಲರ್​ಗಳ ಬೆಂಡೆತ್ತುವ ಮೂಲಕ ಸಿಕ್ಸರ್​ಗಳ ಸುರಿಮಳೆಗೈದರು. ಅಲ್ಲದೆ ಕೇವಲ 37 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 79 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್​ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 200+ ರನ್​ ನೀಡಿದ ಅಪಕೀರ್ತಿಯೊಂದು ಆರ್​ಸಿಬಿ ತಂಡದ ಪಾಲಾಯಿತು. WPL ಇತಿಹಾಸದಲ್ಲಿ ಕೇವಲ 6 ಬಾರಿ ಮಾತ್ರ 200+ ಸ್ಕೋರ್ ಮೂಡಿಬಂದಿದೆ. ಈ ಆರಲ್ಲಿ ಮೂರು ಬಾರಿ ಆರ್​ಸಿಬಿ ತಂಡವೇ 200+ ಸ್ಕೋರ್ ಬಿಟ್ಟುಕೊಟ್ಟಿದೆ.

2023 ರ WPL ಸೀಸನ್​ನಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 223 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ 2023 ರಲ್ಲೇ ಗುಜರಾತ್ ಜೈಂಟ್ಸ್ ತಂಡ 201 ರನ್​ ಚಚ್ಚಿದ್ದರು. ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ತಂಡವೇ 201 ರನ್​ ಬಾರಿಸಿದೆ. ಇದರೊಂದಿಗೆ ಐಪಿಎಲ್​ನಲ್ಲಿ ಅತ್ಯಧಿಕ ಬಾರಿ 200 ರನ್ ನೀಡಿದ ತಂಡವೆಂಬ ಅನಗತ್ಯ ದಾಖಲೆ ಆರ್​ಸಿಬಿ ತಂಡದ ಪಾಲಾಗಿದೆ.

ಹಾಗೆಯೇ ವುಮೆನ್ಸ್ ಪ್ರೀಮಿಯರ್ ಲೀಗ್​ ಇನಿಂಗ್ಸ್​ವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ತಂಡವೆಂಬ ಹೀನಾಯ ದಾಖಲೆಗೂ ಆರ್​ಸಿಬಿ ಕೊರೊಳೊಡ್ಡಿದೆ. 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಬೌಲರ್​ಗಳು 11 ಸಿಕ್ಸ್ ಚಚ್ಚಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೌಲರ್​ಗಳು 10 ಸಿಕ್ಸ್ ಹೊಡೆಸಿಕೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here