ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ ಸಿದ್ಧತೆಗಳು ಜೋರಾಗಿವೆ. 2026ರ ಸೀಸನ್‌ಗೆ ಸಂಬಂಧಿಸಿದ ಮೆಗಾ ಹರಾಜು ಮುಂದಿನ ತಿಂಗಳು ನವೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಮೆಗಾ ಹರಾಜು ಪ್ರಕ್ರಿಯೆ ಐಪಿಎಲ್ ಮಾದರಿಯಲ್ಲಿಯೇ ನಡೆಯಲಿದ್ದು, ಇದು ಮಹಿಳಾ ಲೀಗ್‌ನ ನಾಲ್ಕನೇ ಆವೃತ್ತಿಗೆ ಪ್ರಮುಖ ಅಂಕಣವಾಗಲಿದೆ. ಹರಾಜಿನ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ ನವೆಂಬರ್ 26 ಅಥವಾ 27ರಂದು ಹರಾಜು ನಡೆಯುವ ಸಾಧ್ಯತೆಯಿದೆ. ಮೊದಲು ನವೆಂಬರ್ 26ರಿಂದ 29ರವರೆಗೆ ದಿನಾಂಕ ನಿಗದಿ ಮಾಡಲಾಗಿದ್ದರೂ, ಈಗ ವೇಳಾಪಟ್ಟಿಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಹರಾಜು ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮೆಗಾ ಹರಾಜು ದೆಹಲಿಯಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಹೊಸ ತಂಡ ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದರೂ, ಅದು ನಡೆಯದಂತೆ ಕಾಣುತ್ತಿದೆ. ಹೀಗಾಗಿ, ನಾಲ್ಕನೇ ಸೀಸನ್‌ನಲ್ಲಿಯೂ ಐದು ತಂಡಗಳೇ ಸ್ಪರ್ಧಿಸಲಿವೆ. ಮೆಗಾ ಹರಾಜಿನಲ್ಲಿ ಸುಮಾರು 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ನವೆಂಬರ್ 5ರೊಳಗೆ ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.



