HomeGadag Newsಯಕ್ಷ ಸಂಭ್ರಮ, ಪ್ರಶಸ್ತಿ ಪ್ರದಾನ ಜು.28ಕ್ಕೆ

ಯಕ್ಷ ಸಂಭ್ರಮ, ಪ್ರಶಸ್ತಿ ಪ್ರದಾನ ಜು.28ಕ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿರುವ ನಗರದ ಕಲಾಚೇತನ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜುಲೈ 28ರಂದು ಸಂಜೆ 6 ಗಂಟೆಗೆ ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ `ಯಕ್ಷ ಸಂಭ್ರಮ’ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಸಂಸದರು ಹಾಗೂ ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

ಬೆಂಗಳೂರಿನ ಚಲನಚಿತ್ರ, ರಂಗಭೂಮಿ ಕಲಾವಿದರಾದ ರಾಮಕೃಷ್ಣ ನೀರ್ನಳ್ಳಿ, ವೈದ್ಯರು ಹಾಗೂ ಕ್ರೀಡಾಪಟುಗಳಾದ ಡಾ. ಜಿ.ಬಿ ಬಿಡಿನಹಾಳ, ಕುಂದಾಪುರದ ಯಕ್ಷಗಾನ ಕಲಾವಿದರಾದ ರಾಘವೇಂದ್ರ ಮಯ್ಯ ಅವರಿಗೆ ಕಲಾಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಸಿದ್ಧ ತಾಳಮದ್ದಲೆ ಕಲಾವಿದರಾದ ಮೋಹನ ಭಾಸ್ಕರ ಹೆಗಡೆ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ತೋಂಟದಾರ್ಯ ಸಂಸ್ಥಾನಮಠದ ಆಡಳಿತಾಧಿಕಾರಿ ಎಸ್.ಎಸ್ ಪಟ್ಟಣಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಉಷಾ ದಾಸರ ಆಗಮಿಸುವರು.

ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ, ಕುಂದಾಪುರದಿAದ ಯಕ್ಷಗಾನ ಜರುಗುವುದು. ಪ್ರಸಂಗ-ಕೀಚಕ ವಧೆ ಮತ್ತು ಭಾರತ ರತ್ನ, ವಿಶೇಷ ಆಕರ್ಷಣೆ ಚಿಟ್ಟಾಣಿಯವರ ಕೀಚಕ ಪಾತ್ರ ನಿರ್ವಹಣೆಯಿದೆ. ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಆಗಮಿಸಲು ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ಸಂಚಾಲಕರಾದ ಡಾ. ಕಾವೆಂಶ್ರೀ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!