ಬೆಂಗಳೂರು: ಚಿಕ್ಕಮಗಳೂರು ಜನ ಉಗಿದಿದ್ದಕ್ಕೆ ಅವರು ಯಶವಂತಪುರ ಬರಬೇಕಾಯಿತು ಎಂದು ಶಾಸಕ ಎಸ್ ಟಿ ಸೋಮಶೇಖರ್ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ್ದಾರೆ. ಶೋಭಾ ಕರಂದ್ಲಾಜೆ ತಮ್ಮ ವಿರುದ್ಧ ಮಾಡಿರುವ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
ಇಬ್ಬರೂ ಯಶವಂತಪುರದಲ್ಲಿ ಸ್ಪರ್ಧೆ ಮಾಡೋಣ, ಜನ ತಿರ್ಮಾನ ತೆಗೆದುಕೊಳ್ಳುತ್ತಾರೆ, ಅಗ ಯಾರ ತಾಕತ್ತು ಎಷ್ಟು ಅನ್ನೋದು ಗೊತ್ತಾಗುತ್ತದೆ, ಚಿಕ್ಕಮಗಳೂರು ಜನ ಉಗಿದಿದ್ದಕ್ಕೆ ಅವರು ಯಶವಂತಪುರ ಬರಬೇಕಾಯಿತು, ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿರದಿದ್ದರೆ ಅವರ ಪಾಪದ ಕೊಡ ತುಂಬುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಮತ ಯಾಚಿಸುತ್ತಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಚನ್ನಪಟ್ಟಣ ನನ್ನ ಹುಟ್ಟೂರು, ಅಲ್ಲಿ ಯಾರಾದರೂ ಸಲಹೆ ಕೇಳಿದರೆ ಕೊಡುತ್ತೇನೆ, ಯೋಗೇಶ್ವರ್ ಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.



