ಯತೀಂದ್ರ ಒಬ್ಬರು ಮಾಜಿ ಎಂಎಲ್ಎ, ಖಾಲಿ ಮನುಷ್ಯ ಅಲ್ಲ: ಚಲುವರಾಯಸ್ವಾಮಿ

0
Spread the love

ಮಂಡ್ಯ: ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಯತೀಂದ್ರ ಸಿದ್ದರಾಮಯ್ಯ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ. ಡಾ.ಯತೀಂದ್ರ ಒಬ್ಬ ಮಾಜಿ ಎಂಎಲ್‌ಎ, ಖಾಲಿ ಮನುಷ್ಯ ಅಲ್ಲ. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸಿದ್ದರಿಂದ ಅವರು ನಿಲ್ಲಲು ಆಗಿಲ್ಲ. ಮೈಸೂರು ಜಿಲ್ಲೆ, ಪಕ್ಷದಲ್ಲಿ ಡಾ.ಯತೀಂದ್ರ ಪ್ರಮುಖ ನಾಯಕ.

Advertisement

ಮಾಜಿ ಶಾಸಕರು ಕೆಲಸ ಮಾಡುವುದನ್ನು ತಪ್ಪು ಅನ್ನೋಕೆ ಆಗುತ್ತಾ? ವಿಡಿಯೋದಲ್ಲಿ ಯಾವ ವಿಚಾರದ ಬಗ್ಗೆ ಅವರು ಹೇಳಿದರೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಆ್ಯಂಡ್ ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕಟ್ ಆ್ಯಂಡ್​ ಪೇಸ್ಟ್​ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸುವುದೇ ಬೇರೆ ಇರುತ್ತದೆ. ಯತೀಂದ್ರ ಸಾರ್ವಜನಿಕ ಸೇವೆಯಲ್ಲಿ‌ ಇರೋದು ಅಪರಾಧವಲ್ಲ. ವರುಣ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ತಪ್ಪೇನಿದೆ? ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ ತಪ್ಪೇನು? ಎಂದು ಕೇಳಿದರು.


Spread the love

LEAVE A REPLY

Please enter your comment!
Please enter your name here