ಬೆಂಗಳೂರು: ಸಿದ್ದರಾಮಯ್ಯ ಅವರನ್ನ ಒಡೆಯರ್ ಗೆ ಹೋಲಿಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ತಂದೆ ಮೇಲಿರುವ ದುರಭಿಮಾನದಿಂದ ಹೇಳಿದ್ದಾರೆ. ಕರ್ನಾಟಕಕ್ಕೆ ಒಡೆಯರ್ ಅವರ ಕಾಣಿಕೆ ತುಂಬಾ ಇದೆ. ಕೆಆರ್ಎಸ್ನಿಂದ ನಾವು ಅನ್ನ ತಿಂದಿದ್ದೇವೆ. ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ತಂದವರು ಒಡೆಯರ್ ಎಂದರು.
Advertisement
ಇನ್ನೂ ಮುಡಾದಲ್ಲಿ 14 ಸೈಟ್ ನನಗೆ ಬೇಕು ಎಂದ ಸಿದ್ದರಾಮಯ್ಯ ಅವರನ್ನು, ಚಿನ್ನ ಅಡವಿಟ್ಟು ಕೆಆರ್ಎಸ್ ಕಟ್ಟಿದವರಿಗೆ ಹೋಲಿಕೆ ಮಾಡೋದು ಹಾಸ್ಯಾಸ್ಪದ. ಗಾಂಧೀಜಿ ಅವರಿಗೆ ಹೋಲಿಕೆ ಮಾಡ್ಲಿಲ್ವಲ್ಲ ಪುಣ್ಯ. ಇದು ರಾಜಮನೆತನಕ್ಕೆ, ಮೈಸೂರಿನ ಜನಕ್ಕೆ ಮಾಡಿದ ಅವಮಾನ. ಕೂಡಲೇ ಯತೀಂದ್ರ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.