ಹುಬ್ಬಳ್ಳಿ: ಡಿ.ಕೆ. ಶಿವಕುಮಾರ್ ಜೈಲಿನಲ್ಲಿ ವೀರೇಂದ್ರ ಪಪ್ಪಿ ಮತ್ತು ವಿನಯ್ ಕುಲಕರ್ಣಿ ರನ್ನು ಭೇಟಿ ಮಾಡಿದ್ದರು. ಈ ಭೇಟಿ ರಾಜಕೀಯದಲ್ಲಿ ಹೊಸ ತಿರುವು ಸೃಷ್ಟಿಸಿತ್ತು. ಇದಕ್ಕೆ ಪ್ರತಿಯಾಗಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ರಾಜಕೀಯ ಅಖಾಡಕ್ಕೆ ಇಳಿದಿರುವುದು ಗಮನ ಸೆಳೆದಿದೆ.
ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯರನ್ನು ಯತೀಂದ್ರ ಸಿದ್ದರಾಮಯ್ಯ ರಹಸ್ಯವಾಗಿ ಭೇಟಿಯಾದ ವಿಚಾರ ಇದೀಗ ಕುತೂಹಲ ಮೂಡಿಸಿದೆ. ಈ ಭೇಟಿ ನಂಬರ್ ಗೇಮ್ನ ಭಾಗವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಹುಬ್ಬಳ್ಳಿಯ ಸಂತೋಷ ನಗರದಲ್ಲಿರುವ ಪ್ರಸಾದ್ ಅಬ್ಬಯ್ಯ ನಿವಾಸಕ್ಕೆ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅಬ್ಯಯ್ಯ, ಸಹಿ ಸಂಗ್ರಹಕ್ಕೆ ನನಗೆ ಯಾವುದೇ ಕರೆ ಬಂದಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ. ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಚಿಂತಿಸಿಲ್ಲ ಎಂದು ತಿಳಿಸಿದ್ದಾರೆ.


